ADVERTISEMENT

ಮಹೇಂದರ್‌ಗೆ ಕಾಯಕ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 17:12 IST
Last Updated 11 ಜುಲೈ 2024, 17:12 IST
ಆರ್,ಮಹೇಂದರ್
ಆರ್,ಮಹೇಂದರ್   

ಯಳಂದೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನೀಡುವ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ತಾಲ್ಲೂಕಿನ ಕೊಮಾರನಪುರದ ಸುಗಮ ಸಂಗೀತ ಕಲಾವಿದ ಮಹೇಂದರ್ ಭಾಜನರಾಗಿದ್ದಾರೆ.

ಮಹೇಂದರ್ ಖ್ಯಾತ ನಟ ವಿಷ್ಣುವರ್ಧನ್ ಅವರ ಸಂಗೀತ ಸಂಜೆಗಳ ಹಾಡುಗಳಿಗೆ ನಿರ್ದೇಶನ ಮಾಡಿದ್ದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಟ್ರ್ಯಾಕ್ ಗೀತೆಗಳಿಗೂ ಧ್ವನಿ ನೀಡಿದ್ದಾರೆ. ಚಲನಚಿತ್ರ ಹಾಗೂ ಚಾಮರಾಜನಗರ ಜಿಲ್ಲೆಯ ಜನಪದ ಹಾಗೂ ಸುಗಮ ಸಂಗೀತ ಗೀತೆಗಳ ನೂರಾರು ಸರಣಿಗಳಲ್ಲಿ ಹಾಡಿದ್ದಾರೆ. ಹತ್ತಾರು ವಾಹಿನಿಗಳಲ್ಲಿ ಕೆಲಸ ಮಾಡಿರುವ ಇವರು ಜೀ ವಾಹಿನಿಯ ಸರಿಗಮಪ ಜ್ಯೂರಿಯಾಗಿ ಇವರ ಸೇವೆ ಮುಂದುವರಿದಿದೆ.

ಇದೇ 13ರಂದು ಬೀದರ್ ನಗರದ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜು ಕಾಯಕ ರತ್ನ ಪ್ರಶಸ್ತಿ ನೀಡಲಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮುಡಿಗುಂಡ ಮಹದೇವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.