ADVERTISEMENT

ಕೊಳ್ಳೇಗಾಲ: ಮನೆಯ ಬಾಗಿಲು ಒಡೆದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:52 IST
Last Updated 29 ಜನವರಿ 2026, 6:52 IST
ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ಕಳ್ಳರು ಕಾರ್ಮಿಕರೊಬ್ಬರ ಮನೆಯ ಬಾಗಿಲು ಒಡೆದು 2 ಗ್ರಾಂ ಚಿನ್ನ ಹಾಗೂ ₹1.10 ಲಕ್ಷ ನಗದು ಕಳವು ಮಾಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ಕಳ್ಳರು ಕಾರ್ಮಿಕರೊಬ್ಬರ ಮನೆಯ ಬಾಗಿಲು ಒಡೆದು 2 ಗ್ರಾಂ ಚಿನ್ನ ಹಾಗೂ ₹1.10 ಲಕ್ಷ ನಗದು ಕಳವು ಮಾಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಕೊಳ್ಳೇಗಾಲ: ತಾಲ್ಲೂಕಿನ ಕುಂತೂರು ಗ್ರಾಮದಲ್ಲಿ ಮನೆಯ ಬಾಗಿಲು ಒಡೆದು 2 ಗ್ರಾಂ ಚಿನ್ನ ಹಾಗೂ ₹1.10 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಗ್ರಾಮದ ಕೂಲಿಕಾರ್ಮಿಕ ರಂಗಸ್ವಾಮಿ ಎನ್ನುವರ ಮನೆಯಲ್ಲಿ ಕಳ್ಳತನ ಆಗಿದೆ. ರಂಗಸ್ವಾಮಿ ಮತ್ತು ಅವರ ಪತ್ನಿ ಇಬ್ಬರು ಮನೆಗೆ ಬೀಗ ಹಾಕಿಕೊಂಡು ಬೆಳಕವಾಡಿ ಗ್ರಾಮದಲ್ಲಿರುವ ಮಗಳ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಅಗರ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಸುಬ್ರಮಣ್ಯಿ, ಪಿಎಸ್ಐ ಕರಿಬಸಪ್ಪ ಭೇಟಿ ನೀಡಿ ಬೆರಳಚ್ಚುದಾರರು ಹಾಗೂ ಶ್ವಾನದಳದವರನ್ನು ಕರೆಯಿಸಿ ಪರಿಶೀಲಿಸಿದರು. ಕಳ್ಳರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.