ADVERTISEMENT

ಗುಂಡ್ಲುಪೇಟೆ: ವಾಚರ್‌ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 3:21 IST
Last Updated 9 ನವೆಂಬರ್ 2025, 3:21 IST
ಚಿರತೆ ದಾಳಿಯಿಂದ ಗಾಯಗೊಂಡ ವಾಚರ್‌ ಬಂಗಾರು ಅವರಿಗೆ ವೈದ್ಯರಿಂದ ಚಿಕಿತ್ಸೆ 
ಚಿರತೆ ದಾಳಿಯಿಂದ ಗಾಯಗೊಂಡ ವಾಚರ್‌ ಬಂಗಾರು ಅವರಿಗೆ ವೈದ್ಯರಿಂದ ಚಿಕಿತ್ಸೆ    

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಯಡವನಹಳ್ಳಿ ಬಳಿ ಶನಿವಾರ ಕಾರ್ಯಾಚರಣೆ ನಡೆಸುತ್ತಿದ್ದಾಗ ಓಂಕಾರ್‌ ವಲಯ ಅರಣ್ಯ ಇಲಾಖೆ ವಾಚರ್‌ ಬಂಗಾರು ಎಂಬುವವರ ಮೇಲೆ ಚಿರತೆ ದಾಳಿ ನಡೆಸಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಯಡಿಯಾಳ ಉಪವಿಭಾಗದ ಓಂಕಾರ್‌ ವಲಯಕ್ಕೆ ಸೇರಿದ ಹೊರೆಯಾಲ ಗ್ರಾಮದ ಕುರಿಗಾಹಿ ಜೋಗಯ್ಯ ಅವರು ಯಡವನಹಳ್ಳಿ ಸುತ್ತಮುತ್ತ ಮೇಕೆ ಮೇಯಿಸುತ್ತಿದ್ದಾಗ, ಚಿರತೆ ದಾಳಿ ನಡೆಸಿ ಮೇಕೆಗಳನ್ನು ಕೊಂದಿತ್ತು.

ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ್ದರು. ಪಟಾಕಿ ಸಿಡಿಸಿದ್ದರು. ಪೊದೆಯಲ್ಲಿ ಅಡಗಿದ್ದ ಚಿರತೆಯು ಪಟಾಕಿ ಸದ್ದಿಗೆ ಬೆಚ್ಚಿ ಬಿದ್ದು ವಾಚರ್‌ ಮೇಳೆ ದಾಳಿ ನಡೆಸಿತು. ಜೊತೆಗಿದ್ದವರು ಕೂಗಾಡಿದಾಗ ಓಡಿಹೋಯಿತು. 

ADVERTISEMENT

ಬಂಗಾರು ಅವರ ಕೈ, ಕುತ್ತಿಗೆ, ತಲೆಗೆ ಗಂಭೀರ ಗಾಯಗಳಾಗಿವೆ. ಬೇಗೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.