ADVERTISEMENT

ಸಂತೇಮರಹಳ್ಳಿ: ಚಿರತೆ ಹೆಜ್ಜೆ ಗುರುತು ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:19 IST
Last Updated 23 ಮೇ 2025, 13:19 IST
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಜಮೀನೊಂದರಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿರುವುದನ್ನು ರೈತರೊಬ್ಬರು ತೋರಿಸುತ್ತಿದ್ದಾರೆ.
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಜಮೀನೊಂದರಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿರುವುದನ್ನು ರೈತರೊಬ್ಬರು ತೋರಿಸುತ್ತಿದ್ದಾರೆ.   

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಜಮೀನೊಂದರಲ್ಲಿ ಶುಕ್ರವಾರ ಚಿರತೆ ಹೆಜ್ಜೆ ಗುರುತು ಕಾಣಿಸಿಕೊಂಡಿದೆ.

ಗ್ರಾಮದ ನಿವಾಸಿಗಳಾದ ಸುಪ್ರಿಯ, ಕೆ.ಪಿ.ಮಹೇಶ್, ಕೆ.ಎಂ.ರಾಜೇಂದ್ರಸ್ವಾಮಿ, ಕೃಷ್ಣಸ್ವಾಮಿ ಎಂಬುವರು ಗುರುವಾರ ಬೆಳಿಗ್ಗೆ ತಮ್ಮ ಜಮೀನಿಗೆ ತೆರಳಿದ ವೇಳೆ ಚಿರತೆ ಸಂಚಾರ ಕಂಡಿದೆ. ಇದರಿಂದ ಜಮೀನುಗಳಿಗೆ ತೆರಳುವ ಅಕ್ಕ ಪಕ್ಕದ ಗ್ರಾಮಗಳ ರೈತರು ಆತಂಕಗೊಂಡಿದ್ದಾರೆ.

ಜಮೀನುಗಳ ಪಕ್ಕದಲ್ಲಿ ಕರಿಕಲ್ಲು ಕ್ವಾರಿ ಇರುವ ಹಿನ್ನೆಲೆ ಚಿರತೆ ಈ ಭಾಗದಲ್ಲಿ ಸಂಚಾರ ಮಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ ಬೋನ್ ಇರಿಸಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿಗಳಾದ ಎಸ್.ಮಹದೇವಯ್ಯ, ಕೆ.ಪಿ.ಮಹೇಶ್, ಕೆ.ಎಂ.ರಾಜೇಂದ್ರಸ್ವಾಮಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.