ADVERTISEMENT

ಲಿಂಗಾಯತ ಮಹಾಸಭಾ: ಸೆ.3 ರಿಂದ ಸದಸ್ಯತ್ವ ಅಭಿಯಾನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 14:41 IST
Last Updated 30 ಆಗಸ್ಟ್ 2018, 14:41 IST

ಚಾಮರಾಜನಗರ: ಬಸವಣ್ಣನವರ ತತ್ವ ಆದರ್ಶದಡಿಈಗಾಗಲೇ ರಾಜ್ಯ ಮಟ್ಟದಲ್ಲಿ ಸ್ಥಾಪನೆಯಾಗಿರುವಜಾಗತಿಕ ಲಿಂಗಾಯತಮಹಾಸಭಾವನ್ನು ಜಿಲ್ಲಾ ಮಟ್ಟದಲ್ಲಿ ಸಂಘಟಿಸುವ ಸಲುವಾಗಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದುಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಹೇಳಿದರು.

ತಾಲ್ಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಸೆಪ್ಟೆಂಬರ್‌ 3ರಂದು ಸಂಜೆ 7 ಗಂಟೆಗೆ ಸದಸ್ಯತ್ವ ಅಭಿಯಾನ ಹಾಗೂ ಜಾಗೃತಿ ಸಮಾವೇಶಕ್ಕೆ ಚಾಲನೆ ದೊರೆಯಲಿದೆ. ನಂತರ ಜಿಲ್ಲೆಯ ಎಲ್ಲ ಗ್ರಾಮೀಣ ಭಾಗಗಳಲ್ಲಿ ಅಭಿಯಾನ ನಡೆಸಲಾಗುತ್ತದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಸವಣ್ಣನವರು ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲೇ ಲಿಂಗಾಯತಧರ್ಮ ಸ್ಥಾಪನೆ ಮಾಡಿದ್ದರು.ಲಿಂಗ ಧರಿಸುವವರುಅವರ ಧರ್ಮವನ್ನು ಒಪ್ಪಿಕೊಂಡಂತೆ. ಧರ್ಮದ ಉಳಿವಿಗಾಗಿ ಈ ಅಭಿಯಾನ ಆರಂಭಿಸಲಾಗಿದೆ ಎಂದರು.

ADVERTISEMENT

‘ಸದಸ್ಯತ್ವ ಅಭಿಯಾನದ ಮೂಲಕ ಲಿಂಗಾಯತಬಂಧುಗಳು ಒಗ್ಗೂಡಬೇಕು. ಜಿಲ್ಲೆಯಲ್ಲಿ ಸಂಘಟನೆಗೆ ಮುಂದಾಗಬೇಕು. ಗ್ರಾಮಗಳಲ್ಲಿ ಜಾಗೃತಿ ಸಮಾವೇಶ ಹಾಗೂ ಕಾರ್ಯಕ್ರಮ ಮಾಡಿದರೆ ಎಲ್ಲರೂ ಬರುತ್ತೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲು ಗ್ರಾಮೀಣ ಪ್ರದೇಶದ ಜನರು ಸಹಕರಿಸಬೇಕು’ ಎಂದು ಕೋರಿದರು.

ಚುನಾವಣೆ: ಮುಂದಿನ ದಿನಗಳಲ್ಲಿ ನಡೆಸುವ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರು, ನಿರ್ದೇಶಕರ ಚುನಾವಣೆಯಲ್ಲಿ ಸದಸ್ಯರು ಮತ ಚಲಾಯಿಸಬಹುದು. ಗ್ರಾಮೀಣ ಪ್ರದೇಶದವರಿಗೆ ₹100, ಇತರರಿಗೆ ₹500 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್ ತಿಳಿಸಿದರು.

ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪೃಥ್ವಿ, ಕೋಶಾಧ್ಯಕ್ಷ ಎನ್.ಶಿವಪ್ರಸಾದ್, ವಕೀಲ ಆರ್.ವಿರೂಪಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.