ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ:ಜಿಲ್ಲಾಧಿಕಾರಿ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:04 IST
Last Updated 9 ಮೇ 2019, 20:04 IST
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ   

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸುವ ಸಲುವಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.

ಅಧಿಸೂಚನೆ ಹೊರಡಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಅವಧಿಯು ಆರಂಭವಾಗಿದೆ. ನಾಮಪತ್ರ ಸಲ್ಲಿಕೆಗೆ ಮೇ16 ಕಡೆ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ20 ಕಡೆ ದಿನ. ಮತದಾನ ಅವಶ್ಯವಿದ್ದರೆ ಮೇ 29ರಂದು ಬೆಳಿಗ್ಗೆ 7ರಿಂದ ಸಂಜೆ5 ಗಂಟೆಯವರೆಗೆ ನಡೆಸಲಾಗುತ್ತದೆ. ಮರುಮತದಾನ ಅವಶ್ಯವಿದ್ದಲ್ಲಿ ಮೇ 30ರಂದು ನಡೆಸಲಾಗುತ್ತದೆ. ಮೇ 31ರಂದು ಬೆಳಿಗ್ಗೆ8 ಗಂಟೆಗೆತಾಲ್ಲೂಕುಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ಕಾರ್ಯವು ಆರಂಭವಾಗಲಿದೆ. ಮೇ 31ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಮೀಸಲಾತಿ ವಿವರ:ಗುಂಡ್ಲುಪೇಟೆ ಪುರಸಭೆಯ23 ವಾರ್ಡುಗಳು, ಹನೂರು ಪಟ್ಟಣ ಪಂಚಾಯಿತಿಯ13 ವಾರ್ಡುಗಳು, ಯಳಂದೂರು ಪಟ್ಟಣ ಪಂಚಾಯಿತಿಯ11 ವಾರ್ಡುಗಳಿಗೆ ಚುನಾವಣೆ ನಿಗದಿಯಾಗಿದ್ದು ಮೀಸಲಾತಿ ವಿವರ ಇಂತಿದೆ.

ADVERTISEMENT

ಗುಂಡ್ಲುಪೇಟೆ ಪುರಸಭೆ:ವಾರ್ಡು ಸಂಖ್ಯೆ1 - ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ2 - ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ3 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ4 - ಸಾಮಾನ್ಯ, ವಾರ್ಡ್ ಸಂಖ್ಯೆ5 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ6 - ಹಿಂದುಳಿದ ವರ್ಗ (ಬಿ), ವಾರ್ಡ್ ಸಂಖ್ಯೆ7 - ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ8 - ಸಾಮಾನ್ಯ, ವಾರ್ಡ್ ಸಂಖ್ಯೆ9 - ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ10 - ಸಾಮಾನ್ಯ, ವಾರ್ಡ್ ಸಂಖ್ಯೆ11 - ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ12 - ಸಾಮಾನ್ಯ, ವಾರ್ಡ್ ಸಂಖ್ಯೆ13- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ14–ಸಾಮಾನ್ಯ, ವಾರ್ಡ್ ಸಂಖ್ಯೆ15- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ16- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ17- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ18- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ19- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ20- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ21- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ22- ಸಾಮಾನ್ಯ, ವಾರ್ಡ್ ಸಂಖ್ಯೆ23- ಸಾಮಾನ್ಯ ಮಹಿಳೆ.

ಹನೂರು ಪಟ್ಟಣ ಪಂಚಾಯಿತಿ:ವಾರ್ಡು ಸಂಖ್ಯೆ1- ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ ಸಂಖ್ಯೆ2- ಸಾಮಾನ್ಯ, ವಾರ್ಡ್ ಸಂಖ್ಯೆ3- ಸಾಮಾನ್ಯ, ವಾರ್ಡ್ ಸಂಖ್ಯೆ4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ5 - ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ6- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ7- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ8- ಸಾಮಾನ್ಯ, ವಾರ್ಡ್ ಸಂಖ್ಯೆ9- ಸಾಮಾನ್ಯ, ವಾರ್ಡ್ ಸಂಖ್ಯೆ10- ಹಿಂದುಳಿದ ವರ್ಗ (ಎ), ವಾರ್ಡ್ ಸಂಖ್ಯೆ11- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ12- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ13- ಪರಿಶಿಷ್ಟ ಜಾತಿ.

ಯಳಂದೂರು ಪಟ್ಟಣ ಪಂಚಾಯಿತಿ: ವಾರ್ಡು ಸಂಖ್ಯೆ 1- ಸಾಮಾನ್ಯ, ವಾರ್ಡ್ ಸಂಖ್ಯೆ2- ಸಾಮಾನ್ಯ, ವಾರ್ಡ್ ಸಂಖ್ಯೆ 3–ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ4- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ5- ಪರಿಶಿಷ್ಟ ಜಾತಿ, ವಾರ್ಡ್ ಸಂಖ್ಯೆ6- ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ7- ಪರಿಶಿಷ್ಟ ಪಂಗಡ (ಮಹಿಳೆ), ವಾರ್ಡ್ ಸಂಖ್ಯೆ8- ಸಾಮಾನ್ಯ, ವಾರ್ಡ್ ಸಂಖ್ಯೆ 9- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ಸಂಖ್ಯೆ10- ಸಾಮಾನ್ಯ ಮಹಿಳೆ, ವಾರ್ಡ್ ಸಂಖ್ಯೆ11- ಸಾಮಾನ್ಯ ಮಹಿಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.