ADVERTISEMENT

ನವಿಲೂರಿನಲ್ಲಿ ಮಸಣಮ್ಮ ಜಾತ್ರೆ    

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 4:03 IST
Last Updated 15 ಆಗಸ್ಟ್ 2025, 4:03 IST
ಸಂತೇಮರಹಳ್ಳಿ ಸಮೀಪದ ನವಿಲೂರಿನಲ್ಲಿ ಮಸಣಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಿತು
ಸಂತೇಮರಹಳ್ಳಿ ಸಮೀಪದ ನವಿಲೂರಿನಲ್ಲಿ ಮಸಣಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯಿತು   

ಸಂತೆಮರಹಳ್ಳಿ: ಸಮೀಪದ ನವಿಲೂರಿನಲ್ಲಿ ಮೂರು ವರ್ಷಕೊಮ್ಮೆ ನಡೆಯುವ ಮಸಣಮ್ಮ ದೇವಿ ಜಾತ್ರಾ ಮಹೋತ್ಸವ ಈಚೆಗೆ ಆದ್ದೂರಿಯಿಂದ ನಡೆಯಿತು.

ಗ್ರಾಮದ ಮಧ್ಯ ಭಾಗದಲ್ಲಿರುವ ದೇವರಹಟ್ಟಿ ಆವರಣದಲ್ಲಿ ಮಸಣಮ್ಮ ದೇವಿ ವಿಗ್ರಹವನ್ನು ದೇವಸ್ಥಾನದ ಪ್ರಧಾನ ಆರ್ಚಕರಿಂದ ಸ್ವಚ್ಫಗೊಳಿಸಿ ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ದರ್ಶನ ಪಡೆದರು.

ನವಿಲೂರು, ವಾಟಾಳ್, ಗೆಜ್ಜೆನಹಳ್ಳಿ, ಗೊದ್ದಲಹುಂಡಿ ಗ್ರಾಮಗಳಲ್ಲಿ ಮಸಣ್ಣಮ್ಮ ದೇವಿಯ ನೂರಾರು ಭಕ್ತರು ತಮ್ಮ ಮನೆಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡು ಎಡೆ ಇಟ್ಟು ಮಸಣ್ಣಮ್ಮ ದೇವಿ ವಿಗ್ರಹ ಮುಂದೆ ಪೂಜೆ ಸಲ್ಲಿಸಿದರು.

ADVERTISEMENT

ದೇವಸ್ಥಾನ ಅರ್ಚಕ ಮಸಣ್ಣಮ್ಮ ದೇವಿ ವಿಗ್ರಹ ಹಾಗೂ ಭಕ್ತರು ಎಡೆಯನ್ನು ತಲೆ ಮೇಲೆ ಹೊತ್ತುಕೊಂಡು ಹೋದರು. ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿ, ತಮಟೆ ಸೇರಿದಂತೆ ನಾನಾ ಕಲಾತಂಡಗಳಿಂದ ಮೆರವಣಿಗೆ ನಡೆಸಲಾಯಿತು. ಬಳಿಕ ದೇವಸ್ಥಾನದಲ್ಲಿ ಮಸಣಮ್ಮ ದೇವಿ ಪ್ರತಿಷ್ಠಾಪಿಸಿ ದೇವಿಯ ಮುಂಭಾಗದಲ್ಲಿ ಎಡೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಹಿಳೆಯರು ತಮ್ಮ ಮನೆಗಳ ಮುಂಭಾಗದಲ್ಲಿ ಮೆರವಣಿಗೆ ಸಾಗುವ ದಾರಿಯೂದ್ದಕ್ಕೂ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮಸಣಮ್ಮ, ರವಳೇಶ್ವರ ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಆ.18ರಂದು ರವಳೇಶ್ವರ ಜಾತ್ರೆ ಹಾಗೂ 21ರಂದು ಮಕಹಬ್ಬ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.