ADVERTISEMENT

ಯಳಂದೂರು: ಹಾಲು ಉತ್ಪಾದಕರ ಸಂಘಕ್ಕೆ ಬಿ.ರಂಗಸ್ವಾಮಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:55 IST
Last Updated 18 ಜೂನ್ 2025, 13:55 IST
ಯಳಂದೂರು ತಾಲ್ಲೂಕಿನ ಕಿನಕಹಳ್ಳಿ– ಕಟ್ನವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ರಂಗಸ್ವಾಮಿ ಹಾಗೂ ಉಪಾಧ್ಯಕ್ಷ ಜಯಪ್ಪ ಅವರನ್ನು ಸದಸ್ಯರು ಬುಧವಾರ ಅಭಿನಂದಿಸಿದರು
ಯಳಂದೂರು ತಾಲ್ಲೂಕಿನ ಕಿನಕಹಳ್ಳಿ– ಕಟ್ನವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ರಂಗಸ್ವಾಮಿ ಹಾಗೂ ಉಪಾಧ್ಯಕ್ಷ ಜಯಪ್ಪ ಅವರನ್ನು ಸದಸ್ಯರು ಬುಧವಾರ ಅಭಿನಂದಿಸಿದರು   

ಯಳಂದೂರು: ತಾಲ್ಲೂಕಿನ ಕಿನಕಹಳ್ಳಿ–ಕಟ್ನವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ರಂಗಸ್ವಾಮಿ, ಉಪಾಧ್ಯಕ್ಷರಾಗಿ ಜಿ.ಜಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಸುಭಾಷಿಣಿ ಕರ್ತವ್ಯ ನಿರ್ವಹಿಸಿದ್ದರು.

ಬಿ.ರಂಗಸ್ವಾಮಿ ಮಾತನಾಡಿ, ‘ಸಹಕಾರ ಸಂಘದಲ್ಲಿ ಒಟ್ಟು 70 ಸದಸ್ಯರಿದ್ದಾರೆ. ಪ್ರತಿನಿತ್ಯ ಇಲ್ಲಿ 600 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಹಾಲಿನ ಇಳುವರಿ ಹೆಚ್ಚಿಸುವ ದೆಸೆಯಲ್ಲಿ ಯೋಜನೆ ರೂಪಿಸಲಾಗುವುದು. ರಾಸು ಮತ್ತು ಮೇವು ಖರೀದಿಗೆ ಹೈನುಗಾರರಿಗೆ ಸಹಾಯಧನ ಒದಗಿಸಲು ಶ್ರಮಿಸಲಾಗುವುದು’ ಎಂದರು.

ADVERTISEMENT

ನಿರ್ದೇಶಕರಾದ ಎನ್.ಕುಮಾರ್, ರಾಚಪ್ಪಾಜಿ, ನಿಂಗಶೆಟ್ಟಿ, ಕೆ.ಜಿ.ಶಿವಣ್ಣ, ಅಂಕಶೆಟ್ಟಿ, ಕೆ.ಬಿ.ಮಹದೇವಸ್ವಾಮಿ, ಭಾಗ್ಯಮ್ಮ, ಲಕ್ಷ್ಮಮ್ಮ, ನಟರಾಜು, ಕೆ.ಎಸ್.ಶಿವಣ್ಣ, ಕಾರ್ಯದರ್ಶಿ ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.