ADVERTISEMENT

ಕೊಳ್ಳೇಗಾಲ: ಕಿಡಿಗೇಡಿಗಳಿಂದ ವಸತಿ ಶಾಲೆ ಕಾಂಪೌಂಡ್ ಧ್ವಂಸ

​ಪ್ರಜಾವಾಣಿ ವಾರ್ತೆ
Published 23 ಮೇ 2025, 14:02 IST
Last Updated 23 ಮೇ 2025, 14:02 IST
ಕೊಳ್ಳೇಗಾಲ ಇಲ್ಲಿನ ಗರ್ಲ್ಸ್ ಹೋಂ ವಸತಿ ಶಾಲೆಯ ಕಾಂಪೌಂಡ್ ಗೋಡೆಯನ್ನು ಗುರುವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.
ಕೊಳ್ಳೇಗಾಲ ಇಲ್ಲಿನ ಗರ್ಲ್ಸ್ ಹೋಂ ವಸತಿ ಶಾಲೆಯ ಕಾಂಪೌಂಡ್ ಗೋಡೆಯನ್ನು ಗುರುವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.   

ಕೊಳ್ಳೇಗಾಲ: ಇಲ್ಲಿನ ಗರ್ಲ್ಸ್ ಹೋಂ ವಸತಿ ಶಾಲೆ ಕಾಂಪೌಂಡ್ ಗೋಡೆಯನ್ನು ಗುರುವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

ಈ ವಸತಿ ಶಾಲೆಯಲ್ಲಿ ಸುಮಾರು 40 ಬಡ ವಿದ್ಯಾರ್ಥಿನಿಯರು ವಾಸವಿದ್ದು, ಈ ನಿಲಯದ ಸುತ್ತಲೂ ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿದೆ. ಕೆಲವೇ ದಿನಗಳ ಹಿಂದೆ ಈ ಗೋಡೆಯನ್ನು ಅಪರಿಚಿತರು ಹಾನಿಗೊಳಿಸಿದ್ದರು. ಮೇ 22ರಂದು ಪುನಃ ಗೋಡೆ ನಿರ್ಮಾಣ ನಡೆಸಲಾಗಿದ್ದರೂ, ಮತ್ತೆ ಅದೇ ಗೋಡೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಹುಟ್ಟುಹಾಕಿದೆ.

ಅಲ್ಲದೆ, ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿನಿಯರ ಕೊಠಡಿಗಳ ಬಾಗಿಲು ತಟ್ಟಿದ ಪ್ರಕರಣಗಳು ಮತ್ತು ಕಾಂಪೌಂಡ್ ಒಳಗಡೆ ಇರುವ ಮರಗಳಲ್ಲಿ ಹಣ್ಣು ಕದಿಯುವಂತಹ ಘಟನೆಗಳೂ ವರದಿಯಾಗಿವೆ. ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ಗಂಭೀರ ಚಿಂತೆ ಉಂಟು ಮಾಡಿದೆ. ಈ ಹಿನ್ನೆಲೆ ವಸತಿ ಶಾಲೆಯ ಜವಾಬ್ದಾರರು ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಘಟನೆ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.