ಕವನ
ಗುಂಡ್ಲುಪೇಟೆ: ಮೊಬೈಲ್‍ಗೆ ಬರುತ್ತಿದ್ದ ಮೆಸೇಜ್ ಸಂಬಂಧ ಪಕ್ಕದ ಮನೆಯವರು ಜಗಳವಾಡಿದ ಕಾರಣ ತಾಲ್ಲೂಕಿನ ಚನ್ನಮಲ್ಲಿಪುರದ ಕವನ (24)ಎಂಬ ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅದೇ ಗ್ರಾಮದ ಯುವತಿಯ ಪಕ್ಕದ ಮನೆಯ ನಿವಾಸಿಗಳಾದ ವೃಷಬೇಂದ್ರ, ಇವರ ಪತ್ನಿ ಕವಿತಾ, ಇವರ ಮಕ್ಕಳಾದ ಕಾವೇರಿ, ಕೀರ್ತನಾ ಮಾನಸಿಕ ಹಿಂಸೆ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿದ್ದು, ಇದು ಪೊಲೀಸರಿಗೆ ದೊರೆತಿದೆ.
ಈಕೆ ತಾನು ಇದೇ ಕಾರಣಕ್ಕಾಗಿ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತನ್ನ ಅಕ್ಕ ಕಾವ್ಯಾಳಿಗೆ ಕರೆ ಮಾಡಿ ತಿಳಿಸಿದರು. ಎಲ್ಲರೂ ಸೇರಿ ಸಮಸ್ಯೆ ಏನಿದೆ ಕೇಳೋಣವೆಂದರೂ ಕೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಳೆ. ಕೂಡಲೆ ತಂದೆ ಕೆಲಸದಿಂದ ವಾಪಸಾಗಿ ಮನೆಗೆ ಹೋಗಿ ನೋಡಲಾಗಿ ಹಾಲ್‌ನಲ್ಲಿ ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯನ್ನು ಮೈಸೂರಿನ ಸೆಕ್ಯೂರ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಆಕೆಯ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.