ADVERTISEMENT

ರಾತ್ರಿ, ವಾರಾಂತ್ಯ ಕರ್ಫ್ಯೂ 30ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 0:49 IST
Last Updated 15 ಆಗಸ್ಟ್ 2021, 0:49 IST
ವಾರಾಂತ್ಯದ ಕರ್ಫ್ಯೂ ನಡುವೆಯೇ ವ್ಯಾಪಾರಿಯೊಬ್ಬರು ಶನಿವಾರ ಧ್ವಜ ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು ದೊಡ್ಡಂಗಡಿ ಬೀದಿಯಲ್ಲಿ ಕಂಡು ಬಂತು
ವಾರಾಂತ್ಯದ ಕರ್ಫ್ಯೂ ನಡುವೆಯೇ ವ್ಯಾಪಾರಿಯೊಬ್ಬರು ಶನಿವಾರ ಧ್ವಜ ಹಾಗೂ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡುತ್ತಿದ್ದು ದೊಡ್ಡಂಗಡಿ ಬೀದಿಯಲ್ಲಿ ಕಂಡು ಬಂತು   

ಚಾಮರಾಜನಗರ: ಕೋವಿಡ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂವನ್ನು ಇದೇ ತಿಂಗಳ 30ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ, ಕಳೆದ ವಾರಕ್ಕೆ ಹೋಲಿಸಿದರೆ ಈ ಶನಿವಾರ ವಾರಾಂತ್ಯದ ಕರ್ಫ್ಯೂ ನಡುವೆಯೇ ಜನ ಹಾಗೂ ವಾಹನಗಳ ಸಂಚಾರ ಸ್ವಲ್ಪ ಹೆಚ್ಚಾಗಿತ್ತು. ಹಣ್ಣು, ತರಕಾರಿ, ಮಾಂಸ, ಹಾಲು, ದಿನಸಿ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಮಾರಾಟ‌ ಮಾಡುವ ಮಳಿಗೆಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿದ್ದವು.

ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಮದ್ಯದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ವಹಿವಾಟು‌ ನಡೆಸಿದವು. ಪಾರ್ಸೆಲ್ ಮಾತ್ರ ಲಭ್ಯ ಇತ್ತು. ಹೋಟೆಲ್ ಗಳು ಇಡೀ ದಿನ ತೆರೆದಿದ್ದರೂ ಪಾರ್ಸೆಲ್ ಮಾತ್ರ ಲಭ್ಯವಿತ್ತು.

ADVERTISEMENT

ಬಸ್ ಸೌಲಭ್ಯ: ಕರ್ಫ್ಯೂ‌‌ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳ‌ ಸಂಚಾರ ಎಂದಿನಂತೆ ಇತ್ತು. ಮಧ್ಯಾಹ್ನದವರೆಗೆ ಪ್ರಯಾಣಿಕರಿದ್ದರು. ಆ ಬಳಿಕ ಹೆಚ್ಚು ಮಂದಿ‌ ಪ್ರಯಾಣಿಸಲಿಲ್ಲ.

ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಆಟೊಗಳು ಟ್ಯಾಕ್ಸಿಗಳು ಮಧ್ಯಾಹ್ನದವರೆಗೂ ಎಂದಿನಂತೆ ಲಭ್ಯ ಇದ್ದವು. ಜನರ ಹಾಗೂ ಖಾಸಗಿ ಓಡಾಟ ಕಳೆದ ವಾರಕ್ಕಿಂತ ಹೆಚ್ಚಾಗಿತ್ತು. ಅಂಗಡಿಗಳೆಲ್ಲ ಮುಚ್ಚಿದ ಮೇಲೆ ಜನ ಸಂಚಾರ ವಿರಳವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.