ADVERTISEMENT

ಚಾಮರಾಜನಗರ: 97 ಹೊಸ ಪ್ರಕರಣ, 167 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 17:16 IST
Last Updated 17 ಜೂನ್ 2021, 17:16 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 97 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಬುಧವಾರಕ್ಕೆ ಹೋಲಿಸಿದರೆ (73) ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ.

ಆಸ್ಪತ್ರೆಯಲ್ಲಿದ್ದ 14, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದ 141 ಹಾಗೂ ಹೋಂ ಐಸೊಲೇಷನ್‌ನಲ್ಲಿದ್ದ 12 ಮಂದಿ ಸೇರಿದಂತೆ 167 ಮಂದಿ ಗುಣಮುಖರಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,020ಕ್ಕೆ ಇಳಿದಿದೆ. ಸೋಂಕಿತರ ಪೈಕಿ 34 ಮಂದಿ ಐಸಿಯುನಲ್ಲಿ, 34 ಮಂದಿ ಹೋಂ ಐಸೊಲೇಷನ್‌ನಲ್ಲಿ ಹಾಗೂ ಉಳಿದವರು ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿದ್ದಾರೆ.

ADVERTISEMENT

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 29,900ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 28,395ಕ್ಕೆ ಹಿಗ್ಗಿದೆ.

ಶುಕ್ರವಾರ 1,915 ಮಂದಿ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,815 ವರದಿಗಳು ನೆಗೆಟಿವ್‌ ಬಂದು, 100 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಮೂವರ ವಿವರಗಳು ಇನ್ನೂ ಪತ್ತೆಯಾಗಿಲ್ಲದೇ ಇರುವುದರಿಂದ 97 ಮಂದಿಯ ಲೆಕ್ಕವನ್ನು ಜಿಲ್ಲಾಡಳಿತ ನೀಡಿದೆ.

ಸೋಂಕಿತ 97 ಜನರಲ್ಲಿ ಚಾಮರಾಜನಗರ ತಾಲ್ಲೂಕಿನ 31, ಗುಂಡ್ಲುಪೇಟೆ ತಾಲ್ಲೂಕಿನ 28, ಕೊಳ್ಳೇಗಾಲದ 16, ಹನೂರಿನ 19, ಯಳಂದೂರು ತಾಲ್ಲೂಕಿನ ಇಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಇದ್ದಾರೆ.

ಸೋಂಕು ಮುಕ್ತರಾದ 167 ಮಂದಿಯಲ್ಲಿಚಾಮರಾಜನಗರ ತಾಲ್ಲೂಕಿನ 67, ಗುಂಡ್ಲುಪೇಟೆಯ 44, ಕೊಳ್ಳೇಗಾಲದ 17, ಹನೂರಿನ 27, ಯಳಂದೂರು ತಾಲ್ಲೂಕಿನ 11 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.