ADVERTISEMENT

ಆನೆಯನ್ನು ಬೆನ್ನಟ್ಟಿದ ಸೀಳು ನಾಯಿಗಳು: ಹಳೆ ವಿಡಿಯೊ- ಹೊಸ ವೈರಲ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:55 IST
Last Updated 17 ಜುಲೈ 2020, 13:55 IST
ಆನೆಯನ್ನು ಸುತ್ತುವರಿದಿರುವ ಸೀಳುನಾಯಿಗಳು (ವಿಡಿಯೊ ಚಿತ್ರ)
ಆನೆಯನ್ನು ಸುತ್ತುವರಿದಿರುವ ಸೀಳುನಾಯಿಗಳು (ವಿಡಿಯೊ ಚಿತ್ರ)   

ಚಾಮರಾಜನಗರ: ಆನೆಯ ಮೇಲೆ ಸೀಳು ನಾಯಿಗಳ ಗುಂಪು ದಾಳಿ ಮಾಡಲು ಯತ್ನಿಸುತ್ತಿರುವ, ವೈರಲ್‌ ಆಗಿರುವ ವಿಡಿಯೊ ತುಣುಕು ಹಳೆಯ ವಿಡಿಯೊವಾಗಿದ್ದು, ಬಿಆರ್‌ಟಿ ಅರಣ್ಯದ್ದಲ್ಲ, ನಾಗರಹೊಳೆಯದ್ದು ಎಂಬುದು ಗೊತ್ತಾಗಿದೆ.

ವನ್ಯಜೀವಿ ಛಾಯಾಗ್ರಾಹಕರಾದ ಮಿಥುನ್‌ ಹುನಗುಂದ ಅವರು ಈ ವಿಡಿಯೊವನ್ನು ಚಿತ್ರೀಕರಿಸಿದ್ದು, 2016ರ ಜುಲೈ 6ರಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ‘ಸೈಜ್‌ ವರ್ಸಸ್‌ ನಂಬರ್ಸ್‌’ ಎಂಬ ತಲೆಬರಹದ ಅಡಿಯಲ್ಲಿ ಪ್ರಕಟಿಸಿದ್ದರು.

ಈ ವಿಡಿಯೊ ತುಣುಕು 59 ಸೆಕೆಂಡ್‌ಗಳಷ್ಟು ಇದೆ. ಈಗ ಇದೇ ವಿಡಿಯೊವನ್ನು ಕತ್ತರಿಸಿ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ನಡೆದಿರುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈಗ ವೈರಲ್ ಆಗಿರುವ ವಿಡಿಯೊ 29 ಸೆಕೆಂಡ್‌ಗಳಿಷ್ಟಿದೆ.

ADVERTISEMENT

ವಿಡಿಯೊದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಿಥುನ್‌ ಹುನಗುಂದ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘2016ರಲ್ಲಿ ಕಬಿನಿ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಿಸಿದ್ದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.