ADVERTISEMENT

ನಾಡಿಗೆ ಬಂದ ಪುನುಗು ಬೆಕ್ಕು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 7:18 IST
Last Updated 15 ಸೆಪ್ಟೆಂಬರ್ 2020, 7:18 IST
ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಪುನುಗು ಬೆಕ್ಕು
ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಪುನುಗು ಬೆಕ್ಕು   

ಸಂತೇಮರಹಳ್ಳಿ: ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಕಾಣಿಸಿಕೊಂಡಿದ್ದಪುನುಗು ಬೆಕ್ಕನ್ನು ಅರಣ್ಯ ಇಲಾಖೆಯವರು ಸೋಮವಾರ ರಕ್ಷಿಸಿದ್ದಾರೆ.

ಗ್ರಾಮದ ಶಿಕ್ಷಕ ಮಹದೇವಸ್ವಾಮಿ, ಮಂಜಪ್ಪ ಎಂಬುವವರ ಮನೆಯಲ್ಲಿ ಕಳೆದ ಒಂದು ವಾರದಿಂದ ಪುನುಗು ಬೆಕ್ಕು ಆಶ್ರಯ ಪಡೆದಿತ್ತು. ಇವರ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ಹಣ್ಣುಗಳು, ತರಕಾರಿಗಳನ್ನು ತಿನ್ನುತ್ತಾ ಓಡಾಡಿಕೊಂಡಿತ್ತು. ಸುತ್ತಲಿನ ನಿವಾಸಿಗಳು ಭಯಭೀತರಾಗಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಬಂದು ಪುನುಗು ಬೆಕ್ಕನ್ನು ಹಿಡಿದು ರಕ್ಷಿಸಿದ್ದಾರೆ.

ಗ್ರಾಮದ ಸುತ್ತಮುತ್ತಕಾಡುಹಂದಿಗಳು, ಮುಳ್ಳುಹಂದಿಗಳು ಹಾಗೂ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಜೊತೆಗೆ ಬೆಳೆಗಳನ್ನು ಹಾಳು ಮಾಡುತ್ತಿವೆ. ಈ ಪ್ರಾಣಿಗಳಿಂದ ರಕ್ಷಣೆ ಒದಗಿಸಬೇಕು ಎಂದು ರೈತ ಮುಖಂಡ ಎಚ್.ಸಿ.ಮಹೇಶ್‌ಕುಮಾರ್ ಅರಣ್ಯ ಇಲಾಖೆಯವರನ್ನು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.