ಚಾಮರಾಜನಗರ: ನಗರಸಭೆಯ ಪರಿಸರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಗರದ ದೊಡ್ಡಂಗಡಿ ಬೀದಿ, ರಥ ಬೀದಿ, ಮಾರಿಗುಡಿ, ಚಿಕ್ಕಂಗಡಿ ಬೀದಿಗಳಲ್ಲಿರುವ ದಿನಸಿ ಅಂಗಡಿ, ಬೇಕರಿ, ತಳ್ಳುಗಾಡಿ, ಫ್ಲವರ್ ಸ್ಟಾಲ್ ಹಾಗೂ ಇತರ ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.
ದಾಳಿ ವೇಳೆ 15 ಕೆ.ಜಿ ಪ್ಲಾಸ್ಟಿಕ್ ಕವರ್, ಲೋಟ ವಶಪಡಿಸಿಕೊಂಡು 10 ಅಂಗಡಿಗಳ ಮಾಲೀಕರಿಗೆ ತಲಾ ₹500 ದಂಡ ಹಾಕಿದರು. ದಿನಸಿ ಅಂಗಡಿ, ಬೇಕರಿ, ಪಾಸ್ಟ್ ಪುಡ್ ಸೆಂಟರ್, ವೈನ್ಸ್ ಸ್ಟೋರ್ ಸಹಿತ ಹಲವು ವಾಣಿಜ್ಯ ಮಳಿಗೆಗಳಿಗೆ ಭೇಟಿನೀಡಿ ನಿಷೇಧಿತ ಪ್ಯಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಯಿತು.
ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಆರೋಗ್ಯ ಶಾಖೆಯ ಸಿಬ್ಬಂದಿ ಮಣಿಕಂಠ, ಚೇತನ್, ನಿತಿನ್, ಗೌತಮ್, ರವಿಕುಮಾರ್, ರಿತಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.