ಚಾಮರಾಜನಗರ: ಮರಿಯಾಲದ ಜೆಎಸ್‌ಎಸ್ ಐಟಿಐ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ರಾಷ್ಟ್ರಮಟ್ಟದ ಶಿಶಿಕ್ಷು ಮೇಳವನ್ನು ಬದನಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್ ಉದ್ಘಾಟಿಸಿದರು.
ಮೇಳದಲ್ಲಿ 398 ತರಬೇತಿದಾರರು ಹಾಗೂ 8 ಉದ್ದಿಮೆದಾರರು ಭಾಗವಹಿಸಿದ್ದರು. 167 ಅಭ್ಯರ್ಥಿಗಳನ್ನು ಶಿಶಿಕ್ಷು ತರಬೇತಿಯ ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಪ್ರಧಾನಮಂತ್ರಿ ರಾಷ್ಟ್ರಮಟ್ಟದ ಶಿಶಿಕ್ಷು ಮೇಳದ ನೋಡೆಲ್ ಅಧಿಕಾರಿ ಎಚ್.ಪಿ.ಶ್ರೀಕಂಠಾರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕೌಶಲಾಧಿಕಾರಿ ಮಹಮ್ಮದ್ ಅಕ್ಬರ್ ಪಾಷಾ, ಐಟಿಐ ಕಾಲೇಜು ಪ್ರಭಾರ ಪ್ರಾಂಶುಪಾಲ ಡಿ.ಸಿ.ನಟರಾಜ್, ಪ್ರಾಂಶುಪಾಲ ರವಿಚಂದ್ರ ವೈ.ಎಂ, ತರಬೇತಿ ಅಧಿಕಾರಿ ಎಚ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಪ್ರಕಾಶ್ ಎನ್, ಪ್ರಾರ್ಥಿಸಿದರು. ಜೆಎಸ್‌ಎಸ್ ಐಟಿಐ ಕಾಲೇಜಿನ ಎಂ.ಪಿ.ಸದಾಶಿವಮೂ್ತಿ ಸ್ವಾಗತಿಸಿದರು. ಕಚೇರಿ ಅಧೀಕ್ಷಕ ಮಹದೇವಸ್ವಾಮಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಐಟಿಐಗಳ ಪ್ರಾಂಶುಪಾಲರು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.