ADVERTISEMENT

ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:03 IST
Last Updated 11 ಏಪ್ರಿಲ್ 2022, 16:03 IST
ವಿದ್ಯುತ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆಯ ಪದಾಧಿಕಾರಿಗಳು ಸೋಮವಾರ ಸಂಜೆ ಚಾಮರಾಜನಗರದ ಸೆಸ್ಕ್‌ ಕಚೇರಿ ಎದುರು ಪಂಜು ಹಿಡಿದು ಪ್ರತಿಭಟಿಸಿದರು
ವಿದ್ಯುತ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆಯ ಪದಾಧಿಕಾರಿಗಳು ಸೋಮವಾರ ಸಂಜೆ ಚಾಮರಾಜನಗರದ ಸೆಸ್ಕ್‌ ಕಚೇರಿ ಎದುರು ಪಂಜು ಹಿಡಿದು ಪ್ರತಿಭಟಿಸಿದರು   

ಚಾಮರಾಜನಗರ: ವಿದ್ಯುತ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆಯ ಪದಾಧಿಕಾರಿಗಳು ಸೋಮವಾರ ಸಂಜೆ ನಗರದ ಸೆಸ್ಕ್‌ ಕಚೇರಿ ಎದುರು ಪಂಜು ಹಿಡಿದು ಪ್ರತಿಭಟಿಸಿದರು.

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಅಗತ್ಯವಸ್ತು ಬೆಲೆ ಏರಿಕೆ ಮಾಡುತ್ತಿದೆ. ಈಗ ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಇದರಿಂದ ಜನಸಾಮಾನ್ಯರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

‘ಬೆಲೆ ಏರಿಕೆ ನೀತಿಯನ್ನು ಖಂಡಿಸಬೇಕಾದ ವಿರೋಧ ಪಕ್ಷಗಳೂ ಮೌನವಹಿಸಿವೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ, ವಿರೋಧ ಪಕ್ಷಗಳಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ. ಬೆಲೆ ಏರಿಕೆ ವಾಪಸ್ ಪಡೆಯದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಚಾ.ರಂ.ಶ್ರೀನಿವಾಸಗೌಡ ಅವರು‌ ಎಚ್ಚರಿಸಿದರು.

ADVERTISEMENT

ಶಾ.ಮುರಳಿ, ಚಾ.ರಾ.ಕುಮಾರ್, ನಿಜಧ್ವನಿಗೋವಿಂದರಾಜು, ಗು.ಪುರುಷೋತ್ತಮ್, ಮಹೇಶ್ ಗೌಡ, ಸಾಗರ್ ರಾವತ್, ತಾಂಡವಮೂರ್ತಿ, ವೀರಭದ್ರ, ಆಟೊ ಸುರೇಶ್, ನಂಜುಂಡಸ್ವಾಮಿ ಇತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.