ADVERTISEMENT

ಗೊರವರ ಕುಣಿತದ ಕಲಾವಿದ ಪುಟ್ಟಮಲ್ಲೇಗೌಡ ನಿಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:09 IST
Last Updated 10 ಜೂನ್ 2019, 19:09 IST
ಪುಟ್ಟಮಲ್ಲೇಗೌಡ
ಪುಟ್ಟಮಲ್ಲೇಗೌಡ   

ಚಾಮರಾಜನಗರ: ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಗೊರವರ ಕುಣಿತದ ಕಲಾವಿದ ರಾಮಸಮುದ್ರದ ಪುಟ್ಟಮಲ್ಲೇಗೌಡ (95) ಅವರು ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ನಿಧನರಾದರು.

ವಯೋ ಸಹಜ‌ ಕಾಯಿಲೆಯಿಂದ‌ ಅವರು‌ ಬಳಲುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.

ಬಾಲ್ಯದಿಂದಲೇ ಗೊರವರ ವೇಷ ಧರಿಸಿ ಕುಣಿತ ಆರಂಭಿಸಿದ್ದ ಪುಟ್ಟಮಲ್ಲೇಗೌಡರು, ಸ್ಥಳೀಯ ಕಲೆಯನ್ನು ದೇಶದ ವಿವಿಧೆಡೆಗೆ ಪಸರಿಸಿದ್ದರು. ಅವರಿಗೆ ಜಾನಪದಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳು ಸಂದಿವೆ.

ADVERTISEMENT

ದೆಹಲಿ, ಪುದುಚೇರಿ, ಅಂಡಮಾನ್ ನಿಕೋಬಾರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗೊರವರ ಕುಣಿತ ಪ್ರದರ್ಶನ ನೀಡಿದ್ದರು.

ಅವರ ಪತ್ನಿ ಹಾಗೂ ಪುತ್ರ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಪ್ರಸ್ತುತ ತಮ್ಮ ಪುತ್ರಿಯ ಮನೆಯಲ್ಲಿ ಅವರು ವಾಸವಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ರಾಮಸಮುದ್ರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.