ADVERTISEMENT

ಎಚ್ಚೆತ್ತ ಸೆಸ್ಕ್‌, ಟಿ.ಸಿ ಪರಿಸರ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 14:52 IST
Last Updated 2 ಫೆಬ್ರುವರಿ 2020, 14:52 IST
ವಿದ್ಯುತ್‌ ಪರಿವರ್ತಕವೊಂದರ ಸುತ್ತ ಸ್ವಚ್ಛ ಮಾಡುತ್ತಿರುವ ಸೆಸ್ಕ್‌ ಸಿಬ್ಬಂದಿ
ವಿದ್ಯುತ್‌ ಪರಿವರ್ತಕವೊಂದರ ಸುತ್ತ ಸ್ವಚ್ಛ ಮಾಡುತ್ತಿರುವ ಸೆಸ್ಕ್‌ ಸಿಬ್ಬಂದಿ   

ಕೊಳ್ಳೇಗಾಲ: ನಗರದ ವಿವಿಧ ಬಡಾವಣೆಗಳಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ವಿದ್ಯುತ್‌ ಪರಿವರ್ತಕಗಳ ಸುತ್ತಲಿನ ಪರಿಸರ ಸ್ವಚ್ಛಗೊಳಿಸಿ, ತಡೆ ಬೇಲಿ ನಿರ್ಮಿಸುವ ಕೆಲಸಕ್ಕೆ ಸೆಸ್ಕ್‌ ಸಿಬ್ಬಂದಿ ಮುಂದಾಗಿದ್ದಾರೆ.

ಜನವರಿ 27ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ನಮ್ಮ ನಗರ ನಮ್ಮ ಧ್ವನಿ’ ಅಂಕಣದಲ್ಲಿ ‘ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಸೆಸ್ಕ್‌’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. ವಿದ್ಯುತ್‌ ಪರಿವರ್ತಕಳ ಸುತ್ತಲಿನ ಸುರಕ್ಷತಾ ಬೇಲಿ ಹಾಳಾಗಿರುವುದು, ತಂತಿಗಳು ಜೋತು ಬಿದ್ದಿರುವುದು, ಅವೈಜ್ಞಾನಿಕವಾಗಿ ವಿದ್ಯುತ್‌ ಕಂಬ ಅಳವಡಿಸಿದ್ದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ಬೆಳಕು ಚೆಲ್ಲಿತ್ತು.

ವರದಿಗೆ ಸ್ಪಂದಿಸಿರುವ ಸೆಸ್ಕ್‌,ಕೆಲವು ವಿದ್ಯುತ್ ಪರಿವರ್ತಕಗಳ ಸುತ್ತಲೂ ಬೆಳೆದಿರುವ ಗಿಡ ಗಂಟಿಗಳು ಮತ್ತು ಅದರ ಸುತ್ತ ತಂತಿ ಬೇಲಿ ನಿರ್ಮಿಸಲು ಮುಂದಾಗಿದೆ.ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿ ಪಡಿಸುತ್ತಿದೆ.

ADVERTISEMENT

‘ಪ್ರತಿ ಭಾನುವಾರದಂದು ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಸಾರ್ವಜನಿಕರು ವಿದ್ಯುತ್‌ಗೆ ಸಂಬಂಧಪಟ್ಟ ಸಮಸ್ಯೆಗಳನ್ನುನೇರವಾಗಿ ನಮಗೆ ತಿಳಿಸಿದರೆ ಕೂಡಲೇ ಸರಿಪಡಿಸಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.