ADVERTISEMENT

ಸಂತೇಮರಹಳ್ಳಿ: ಕಾವುದವಾಡಿ ಜಮೀನಿನಲ್ಲಿ ಹೆಬ್ಬಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 6:23 IST
Last Updated 10 ಜುಲೈ 2025, 6:23 IST
ಸಂತೇಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾದ ಹೆಬ್ಬಾವನ್ನು ಸ್ನೇಕ್ ಮಹೇಶ್ ರಕ್ಷಿಸಿದರು
ಸಂತೇಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾದ ಹೆಬ್ಬಾವನ್ನು ಸ್ನೇಕ್ ಮಹೇಶ್ ರಕ್ಷಿಸಿದರು   

ಸಂತೇಮರಹಳ್ಳಿ: ಸಮೀಪದ ಕಾವುದವಾಡಿ ಗ್ರಾಮದ ಜಮೀನೊಂದರಲ್ಲಿ ಹೆಬ್ಬಾವು ಮಂಗಳವಾರ ಪತ್ತೆಯಾಗಿದ್ದು, ಸ್ನೇಕ್ ಮಹೇಶ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಗ್ರಾಮದ ಗುರುಪ್ರಸಾದ್ ಎಂಬುವವರು ತಮ್ಮ ಜಮೀನಿನಲ್ಲಿದ್ದ ಹೆಬ್ಬಾವನ್ನು ಕಂಡು ಮಹೇಶ್ ಅವರಿಗೆ ವಿಷಯ ತಿಳಿಸಿದರು. ಜಮೀನಿನ ಪಕ್ಕದಲ್ಲಿ ಕಬಿನಿ ನಾಲೆ ಇರುವುದರಿಂದ ನಾಲೆಯ ಮೂಲಕ ಹೆಬ್ಬಾವಿನ ಮರಿಗಳು ಬರುತ್ತವೆ. ನೀರು ಬಿಟ್ಟಾಗ ಜಮೀನಿನಲ್ಲಿ ಅಶ್ರಯ ಪಡೆದು ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದು ಬೆಳೆಯುತ್ತವೆ ಎಂದು ಸ್ನೇಕ್ ಮಹೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT