
ಪ್ರಜಾವಾಣಿ ವಾರ್ತೆ
ರಾಗಿ ಒಕ್ಕಣೆ ಯಂತ್ರ (ಪ್ರಾತಿನಿಧಿಕ ಚಿತ್ರ)
ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಬುಧವಾರ ರಾಗಿ ಒಕ್ಕಣೆ ಮಾಡುವಾಗ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಮಹಿಳೆ, ನಗರದ ಮುಡಿಗುಂಡ ಬಡಾವಣೆ ನಿವಾಸಿ ನಾಗಮ್ಮ ಅವರ ಎಡಗೈ ತುಂಡಾಗಿದೆ.
‘ಅವರೂ ಸೇರಿ ನಾಲ್ವರು ಮಹಿಳೆಯರು ಒಕ್ಕಣೆಯಲ್ಲಿ ತೊಡಗಿದ್ದರು. ಚಾಲಕ ಚಾಮುಂಡಿ, ಮಾಲೀಕ ಅಣ್ಣಗಳ್ಳಿ ಬಸವರಾಜು ಸುರಕ್ಷಾ ಕ್ರಮ ಕೈಗೊಂಡಿರಲಿಲ್ಲ’ ಎಂದು ದೂರಲಾಗಿದೆ.
ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಗ್ರಾಮಾಂತರ ಠಾಣೆಗೆ ಮಹಿಳೆ ಅವರ ಮಗಳು ಚನ್ನಾಜಮ್ಮ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.