ADVERTISEMENT

ಚಾಮರಾಜನಗರ: ವಿವಿಧ ಕಡೆ ಮಳೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:18 IST
Last Updated 29 ಏಪ್ರಿಲ್ 2021, 15:18 IST
ಹನೂರು ಪಟ್ಟಣದಾದ್ಯಂತ ಗುರುವಾರ ಸಂಜೆ 10 ನಿಮಿಷಗಳಷ್ಟು ಹೊತ್ತು ಮಳೆಯಾಯಿತು
ಹನೂರು ಪಟ್ಟಣದಾದ್ಯಂತ ಗುರುವಾರ ಸಂಜೆ 10 ನಿಮಿಷಗಳಷ್ಟು ಹೊತ್ತು ಮಳೆಯಾಯಿತು   

ಚಾಮರಾಜನಗರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುರುವಾರ ಸಂಜೆ ಗುಡುಗು ಮಿಂಚುಸಹಿತ ಸಾಧಾರಣ ಮಳೆಯಾಗಿದೆ.

ನಾಲ್ಕೈದು ದಿನಗಳಿಂದ ಪ್ರತಿ ದಿನ ಸಂಜೆ ಮೋಡ ಕವಿದ ವಾತಾವರಣ ಇತ್ತಾದರೂ ಮಳೆಯಾಗಿರಲಿಲ್ಲ.ರೈತರು ಜಮೀನನ್ನು ಹದ ಮಾಡಿ ಮಳೆಯಾಗಿ ಕಾಯುತ್ತಿದ್ದರು. ಗುರುವಾರ ಸುರಿದ ಮಳೆ ಬಿತ್ತನೆಗೆಸಾಕಾಗದಿದ್ದರೂ, ಭೂಮಿಗೆ ತಂಪೆರೆದಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಸಂಜೆ 5.30ರ ಸುಮಾರಿಗೆ ಗಾಳಿ ಗುಡುಗು ಮಿಂಚು ಸಹಿತಮಳೆಯಾಗಲು ಆರಂಭವಾಯಿತು. ಅರ್ಧ ಗಂಟೆಗೂ ಹೆಚ್ಚು ಕಾಲ ಹದವಾಗಿ ಮಳೆಯಾಯಿತು.

ADVERTISEMENT

ಸಂತೇಮರಹಳ್ಳಿ ಮತ್ತು ಯಳಂದೂರು ಭಾಗಗಳಲ್ಲಿ ಗುಡುಗು ಮಿಂಚಿನ ಅಬ್ಬರ ಇತ್ತಾದರೂ, ಮಳೆತುಂತುತು ಹನಿಗಷ್ಟೇ ಸೀಮಿತವಾಯಿತು. ಕೊಳ್ಳೇಗಾಲ, ಹನೂರು ಮತ್ತು ಗುಂಡ್ಲುಪೇಟೆ ಭಾಗಗಳಲ್ಲೂಸುಮಾರಾಗಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.