ADVERTISEMENT

ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬ ಮುಂದಕ್ಕೆ

ದೇವಾಂಗ ಕುಲದ ಯಜಮಾನ ನಾಗರಾಜಯ್ಯ ಅಚ್ಗಾಲ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:41 IST
Last Updated 14 ಅಕ್ಟೋಬರ್ 2025, 4:41 IST
ನಾಗರಾಜಯ್ಯ ಅಚ್ಗಾಲ್
ನಾಗರಾಜಯ್ಯ ಅಚ್ಗಾಲ್   

ಕೊಳ್ಳೇಗಾಲ: ದೇವಾಂಗ ಕುಲ ಗುರುಗಳನ್ನು ಲೆಕ್ಕಿಸದೆ ಕೆಲವರು ಶ್ರೀ ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬವನ್ನು ಮಾಡಲು ಮುಂದಾಗಿದ್ದಾರೆ ಇದು ಸರಿಯಲ್ಲ, ಹಾಗಾಗಿ 12 ವರ್ಷ ತುಂಬಿದ ಬಳಿಕ ಅಂದರೆ 2027ಕ್ಕೆ ದಿನಾಂಕ ನಿಗದಿಪಡಿಸಿ ಕತ್ತಿ ಹಬ್ಬವನ್ನು ಮಾಡಲು ಸಮಾಜ ನಿರ್ಧರಿಸಿದೆ ಎಂದು ನಗರಸಭೆ ಉಪಾಧ್ಯಕ್ಷ ಎ.ಪಿ ಶಂಕರ್ ಹೇಳಿದರು.

ದೇವಾಂಗ ಸಮುದಾಯವನ್ನು ಕೆಲವರು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಹಾಗಾಗಿ ಎಲ್ಲರೂ ಒಟ್ಟಾಗಿ ಸೇರಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಬಹಳ ಅದ್ದೂರಿಯಾಗಿ ಶ್ರೀ ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬವನ್ನು ಆಚರಿಸುತ್ತೇವೆ. ಆದರೆ ನಮ್ಮ ಸಮುದಾಯದವರು ಎರಡು ಗುಂಪುಗಳಾಗಿ ಹಬ್ಬವನ್ನು ಮಾಡಲು ಮುಂದಾಗಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಆಚರಿಸಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಂತರ ದೇವಾಂಗ ಕುಲದ ಯಜಮಾನ ನಾಗರಾಜಯ್ಯ ಅಚ್ಗಾಲ್ ಮಾತನಾಡಿ, ಶ್ರೀ ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬವನ್ನು ಮುಂದೂಡಲಾಗಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ನಿಗದಿಪಡಿಸಲಾಗುತ್ತದೆ. ಕತ್ತಿ ಹಬ್ಬ ನಡೆಯಬೇಕಾದರೆ 12 ವರ್ಷ ತುಂಬಿರಬೇಕು. ಸಮಾಜದ ಮಹಾಸಭೆಯಲ್ಲಿ ಹಬ್ಬದ ನಿರ್ಧಾರಗಳು ಆಗಬೇಕು. ಆದರೆ, ಸಮಾಜದ ಕೆಲವರು ಇವೆಲ್ಲವನ್ನು ಲೆಕ್ಕಿಸದೆ ಹಬ್ಬವನ್ನು 11 ವರ್ಷಕ್ಕೆ ಅಂದರೆ 2026 ಫೆ.4 ರಿಂದ 13 ರವರೆಗೆ ನಡೆಸಲು ನಿರ್ಧರಿಸಿದ್ದಾರೆ. ಕುಲಗುರುಗಳು ಹಾಗೂ ಅಚಾರ್ಯರ ಅನುಮತಿ ಪಡೆದಿಲ್ಲ. ಸಮಾಜದ ಬಂಧುಗಳು ಇದಕ್ಕೆ ಸಹಕರಿಸಬಾರದು, ಯಾವುದೇ ದೇಣಿಗೆ ನೀಡಬಾರದು. 12 ವರ್ಷ ತುಂಬಿದ ಬಳಿಕ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಶೆಟ್ಟಿಗಾರರಾದ ಮುರುಳಿಧರ್, ವೀರಭದ್ರಯ್ಯ, ಶ್ರೀನಿವಾಸ್ ಶಾಸ್ತ್ರಿ, ಕನಕರಾಜು, ಅರುಣಾಚಲ ಟ್ರಸ್ಟ್ ಅಧ್ಯಕ್ಷ ಸುಂದ್ರೇಶ್ ಮಾಸ್ಟರ್, ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದ ರವೀಂದ್ರ ಇದ್ದರು.

‘ಒಂದು ಮಂಡಲ ತುಂಬಿರಬೇಕು’

ಸಮಾಜದ ಶೆಟ್ಟಿಗಾರ ಶ್ರೀನಿವಾಸ್ ಶಾಸ್ತ್ರಿ ಮಾತನಾಡಿ ನಮ್ಮ ಕುಲದ ಶಿಷ್ಟಾಚಾರವನ್ನು ಪಾಲಿಸದೆ ಕುಲ ಗುರುಗಳು 16 ಬೀದಿಗಳ ಏಜೆಂಟರು ಹಾಗು ಕುಲಸ್ಥರು ಮತ್ತು ಶೆಟ್ಟಿಗಾರ ಅನುಮತಿ ಪಡೆಯದೆ ನಮ್ಮ ಸಮಾಜದ ಶಿವಕುಮಾರ್ ಪರಮೇಶ್ವರಯ್ಯ ಸುರೇಶ್ ಲಕ್ಷಣ್ ಸೇರಿ ಕೆಲವು ಮುಖಂಡರ ಜೊತೆ ಸೇರಿಕೊಂಡು ರಾಮಲಿಂಗ ಚೌಡೇಶ್ವರಿ ಕತ್ತಿ ಹಬ್ಬವನ್ನು 2026 ಫೆ.4 ರಿಂದ 13 ರವರೆಗೆ ನಡೆಸಲು ನಿರ್ಧರಿಸಿದ್ದಾರೆ. ಟ್ರಸ್ಟ್ ನಿರ್ಮಿಸಿಕೊಂಡು ದೇಣಿಗೆ ಪಡೆಯಲು ಮುಂದಾಗಿದ್ದಾರೆ.  ಹಬ್ಬದ ನಡೆಸುವ ಸಂಬಂಧ ಕಾರ್ಯಕ್ರಮವನ್ನು ನಡೆಸಿದರೆ ಇದರಿಂದ ಕುಲದ ಶಿಷ್ಟಾಚಾರ ಉಲಂಘಿಸಿದಂತಾಗಿದೆ ಎಂದರು. ಹಬ್ಬ ನಡೆಯಬೇಕಾದರೆ 1 ಮಂಡಲ (48 ವರ್ಷ) ತುಂಬಿರಬೇಕು ಅಥವಾ ಕನಿಷ್ಠ ಕಾಲು ಮಂಡಲ (12 ವರ್ಷ) ಆದರೂ ಆಗಿರಬೇಕಿರುತ್ತದೆ. ಹಬ್ಬಕ್ಕೆ ದೇವಿಯ ಬಳಿ ಪ್ರಸಾದ ಕೇಳಬೇಕಾಗುತ್ತದೆ. ಇವೆಲ್ಲವನ್ನು ಮಾಡದೇ 11 ವರ್ಷಕ್ಕೆ ಹಬ್ಬವನ್ನು ಮಾಡಲು ಮುಂದಾಗಿದ್ದಾರೆ. ಸಮಾಜದ ಜನರು ಅ.12 ರಂದು ಸಮಾಜದವರು ಮಹಾಸಭೆ ನಡೆಸಿ 2027ಕ್ಕೆ ಎಲ್ಲರನ್ನು ಒಳಗೊಡಂತೆ ಬಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಕತ್ತಿ ಹಬ್ಬವನ್ನು ಆಚರಣೆ ಮಾಡುವ ನಿರ್ಧಾರವನ್ನು ಕೈ ಗೊಂಡಿದ್ದೇವೆ. ಯಾರದರೂ ಸದ್ಯಕ್ಕೆ ಕತ್ತಿ ಹಬ್ಬ ಮಾಡುತ್ತೇವೆ ಎಂದು ದೇಣಿಗೆ ಕೇಳಲು ಬಂದರೆ ಸಮಾಜದವರು ಯಾರು ಸಹಕರಿಸಬೇಡಿ ಎಂದು ಮನವಿ ಮಾಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.