ADVERTISEMENT

ಮಾದಪ್ಪನ ಹುಂಡಿಯಲ್ಲಿ ದಾಖಲೆಯ ₹3.26 ಕೋಟಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 13:25 IST
Last Updated 17 ಏಪ್ರಿಲ್ 2025, 13:25 IST
ಹುಂಡಿ ಹಣ ಎಣಿಕೆ ಮಾಡುತ್ತಿರುವ ಸ್ಥಳವನ್ನು ವೀಕ್ಷಿಸಿದ ಶಾಸಕ ಎಂಆರ್ ಮಂಜುನಾಥ್
ಹುಂಡಿ ಹಣ ಎಣಿಕೆ ಮಾಡುತ್ತಿರುವ ಸ್ಥಳವನ್ನು ವೀಕ್ಷಿಸಿದ ಶಾಸಕ ಎಂಆರ್ ಮಂಜುನಾಥ್   

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಬೆಳ್ಳಿ ಮತ್ತು ಚಿನ್ನದ ಎಣಿಕೆ ಹಾಗೂ ಪರ್ಕಾವಣೆ ಕಾರ್ಯ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ಬುಧವಾರ ಜರುಗಿತು.

ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಬರೋಬ್ಬರಿ 3 ಕೋಟಿ ಸಂಗ್ರಹವಾಗಿದ್ದು, ಸಾಲು ಸಾಲು ರಜೆಗಳು ಇದ್ದ ಕಾರಣ ಮುದ್ದು ಮಾದಪ್ಪನ ಹುಂಡಿ ತುಂಬು ತುಳುಕಿದೆ. ಸನ್ನಿಧಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಹಾಗೂ ಪರ್ಕಾವಣೆ ಕಾರ್ಯವನ್ನು ಬುಧವಾರ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣೀಜ್ಯ ಸಂಕೀರ್ಣದಲ್ಲಿ ಶ್ರೀ ಸಾಲೂರು ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು 35 ದಿನಗಳಲ್ಲಿ ಹುಂಡಿಯಲ್ಲಿ ನಾಣ್ಯ ಮತ್ತು ಇ ಹುಂಡಿ ಸೇರಿ 3.26.95.339 ( ಮೂರು ಕೋಟಿ ಇಪ್ಪತ್ತಾರು ಲಕ್ಷದ ತ್ತೊಂಬೊತ್ತೈದು ಸಾವಿರದ ಮುನ್ನೂರ ಮುವತ್ತೊಂಭತ್ತು ) ರೂಪಾಯಿಗಳು ಹಾಗೂ ಚಿನ್ನ 47 ಗ್ರಾಂ, ಹಾಗೂ 2 ಕೆ.ಜಿ.200 ಗ್ರಾಂ ಬೆಳ್ಳಿ ಪದಾರ್ಥ ಸಂಗ್ರಹವಾಗಿದ್ದು, 11 ವಿಧೇಶಿ ನೋಟುಗಳು ಹಾಗೂ 2000 ಮುಖಬೆಲೆಯ 20 ನೋಟುಗಳು ದೊರೆತಿವೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಲೆಕ್ಕಾಧೀಕ್ಷಕರಾದ ಶ್ರೀ ಗುರುಮಲ್ಲಯ್ಯ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಶ್ರೀ ಮಹದೇವಪ್ಪ ಬಿ, ಶ್ರೀ ಮರಿಸ್ವಾಮಿ ರವರು ಹಾಗು ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಶ್ರೀಮತಿ ಕಲ್ಯಾಣಮ್ಮ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.