
ಚಾಮರಾಜನಗರ: ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಆಚರಣೆಗೆ ಸಿದ್ಧತೆಗಳು ನಡೆದಿದ್ದು, ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.
ನಗರದ ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತಲಿನ ವಾಣಿಜ್ಯ ಮಳಿಗೆಗಳು, ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಬೀದಿಗಳಲ್ಲಿ ಎಳ್ಳು, ಬೆಲ್ಲ ಸಹಿತ ಸಕ್ಕರೆ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತಿದೆ.
ಕೆಲವು ವ್ಯಾಪಾರಿಗಳು ಎಳ್ಳು, ಬೆಲ್ಲ, ಕಡಲೆ, ಕೊಬ್ಬರಿ ತುಂಡು, ಕಡಲೆಬೀಜ ಹಾಗೂ ಸಿಹಿ ಜೀರಿಗೆ ಸೇರಿಸಿದ 100 ಗ್ರಾಂನಿಂದ 1 ಕೆ.ಜಿವರೆಗಿನ ಪೊಟ್ಟಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಿಡಿಬಿಡಿಯಾಗಿ ಮಾರಾಟ ಮಾಡುತ್ತಿದ್ದಾರೆ.
ಗ್ರಾಹಕರು ಇಚ್ಛೆಗೆ ಅನುಗುಣವಾಗಿ ಬಿಡಿಬಿಡಿ ಪದಾರ್ಥಗಳನ್ನು ಖರೀದಿಸಿ ನಂತರ ಒಟ್ಟಾಗಿ ಸೇರಿಸಿ ಚಿಕ್ಕ ಪೊಟ್ಟಣಗಳನ್ನು ತಯಾರಿಸಿ ಬಂಧುಗಳು, ನೆರೆ ಹೊರೆಯವರಿಗೆ ಹಂಚಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ ಎನ್ನುತ್ತಾರೆ ವ್ಯಾಪಾರಿ ಸುರೇಶ್.
ಹಬ್ಬಕ್ಕೆ ಹೂ, ಹಣ್ಣು, ತರಕಾರಿ ಖರೀದಿಯೂ ಹೆಚ್ಚಾಗಿದ್ದು ದಿನಸಿ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿವೆ. ಗ್ರಾಮೀಣ ಭಾಗಗಳಿಂದ ಹೆಚ್ಚಾಗಿ ಜನರು ನಗರಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.