
ಪ್ರಜಾವಾಣಿ ವಾರ್ತೆ
ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಸೋಮವಾರ ಅರಣ್ಯ ಇಲಾಖೆಯಿಂದ ಚಿರತೆ ಹಿಡಿಯಲು ಬೋನ್ ಇಡಲಾಗಿದೆ.
ಚಾಮರಾಜನಗರ ಬೀಟ್ ಅರಣ್ಯಾಧಿಕಾರಿ ಸುರೇಶ್‌ಕುಮಾರ್ ಮಾತನಾಡಿ, ‘ಕ್ವಾರಿ ಬಳಿ ಹಾಗೂ ಯಲಕ್ಕೂರು ಗ್ರಾಮದ ಮಹದೇವಪ್ಪ, ವೈ.ಸಿ.ಮಹದೇವಸ್ವಾಮಿ ಅವರ ಜಮೀನುಗಳಲ್ಲಿ ಚಿರತೆ ಸಂಚಾರ ಮಾಡಿರುವ ಹೆಜ್ಜೆ ಗುರುತು ಕಾಣಿಸಿತ್ತು. ರೈತರು ಆತಂಕಗೊಂಡು ಚಿರತೆ ಹಿಡಿಯಲು ಬೋನ್ ಹಾಕಬೇಕೆಂದು ಮನವಿ ನೀಡಿದ್ದರು. ಚಿರತೆ 20 ಕಿ.ಮೀ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತದೆ. ಕ್ವಾರಿ ಹಾಗೂ ಜಾಲಿಮುಳ್ಳಿನ ಪೊದೆಗಳಲ್ಲಿ ಹೆಚ್ಚು ವಾಸಿಸುವ ಕಾರಣ ಬೋನ್ ಇಡಲಾಗಿದೆ. ರಾತ್ರಿ ಗಸ್ತು ಸಂಚಾರವನ್ನೂ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.