ಗುಂಡ್ಲುಪೇಟೆ: ಶಕ್ತಿ ಯೋಜನೆಯಡಿ ಗುಂಡ್ಲುಪೇಟೆ ಘಟಕದದಿಂದ ಸುಮಾರು 3.80 ಕೋಟಿ ಮಹಿಳೆಯರು ಎರಡು ವರ್ಷದಿಂದ ಉಚಿತ ಪ್ರಯಾಣ ಮಾಡಿದ್ದು, ಡಿಪೊಗೆ ₹3 ಕೋಟಿ ಆದಾಯ ಬಂದಿದೆ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಎರಡನೇ ವರ್ಷಾಚರಣೆ ಹಿನ್ನಲೆ ನಿಗಮದ ಬಸ್‍ಗೆ ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಕ್ತಿ ಯೋಜನೆಯಿಂದ ತಾಲ್ಲೂಕಿನ ಬಹುತೇಕ ಮಹಿಳೆಯರಿಗೆ ಅನುಕೂಲವಾಗಿದ್ದು, ಯೋಜನೆ ಹೀಗೆಯೇ ವಿಸ್ತರಣೆ ಆಗಲಿದೆ ಎಂದು ತಿಳಿಸಿದರು.
ಕ್ಷೇತ್ರದ ವಿವಿಧ ಕಡೆಗಳಲ್ಲಿ ಬಸ್ ಸಮಸ್ಯೆ ಇದೆ. ಇದಕ್ಕೆ ಹೊಸ ಬಸ್‌ಗಾಗಿ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸದ್ಯದಲ್ಲೆ ಬಸ್‌ಗಳು ಬರುವ ನಿರೀಕ್ಷೆಯಿದೆ. ಜೊತೆಗೆ ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ತೆರಳವ ಪುರುಷ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಗಳಾಗಿದ್ದು, ಹಂತ ಹಂತವನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಮಧುಸೂದನ್, ಸದಸ್ಯರಾದ ಮಹಮದ್ ಇಲಿಯಾಸ್, ಶ್ರೀನಿವಾಸ್ ಕಣ್ಣಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ತಹಸೀಲ್ದಾರ್ ಟಿ.ರಮೇಶ್ ಬಾಬು, ಡಿಪೊ ವ್ಯವಸ್ಥಾಪಕ ತ್ಯಾಗರಾಜು, ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಉಮಾಪತಿ, ಪ್ರದೀಪ್, ಪಿ.ಬಿ.ರಾಜಶೇಖರ, ದೇವರಹಳ್ಳಿ ಪ್ರಕಾಶ್, ವಿಜಯರಂಜನಿ, ಬನ್ನಿತಾಳಪುರ ಕುಮಾರಸ್ವಾಮಿ, ಸುನೀಲ್, ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.