ADVERTISEMENT

ಕಂಸವಧೆಗೆ ಬರುವ ಮುರಾರಿಯ ನೋಡ ಬನ್ನಿರೋ...

ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ; ಸಡಗರದ ಆಚರಣೆಗೆ ಸಿದ್ಧತೆ

ನಾ.ಮಂಜುನಾಥ ಸ್ವಾಮಿ
Published 1 ಸೆಪ್ಟೆಂಬರ್ 2018, 15:12 IST
Last Updated 1 ಸೆಪ್ಟೆಂಬರ್ 2018, 15:12 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೊಡ್ಡತೇರಿನಲ್ಲಿ ಅಲಂಕೃತರಾದ ರಾಧಾ–ಕೃಷ್ಣ ಚಿತ್ರಗಳು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೊಡ್ಡತೇರಿನಲ್ಲಿ ಅಲಂಕೃತರಾದ ರಾಧಾ–ಕೃಷ್ಣ ಚಿತ್ರಗಳು   

ಯಳಂದೂರು:ನಾಳೆಶ್ರೀಕೃಷ್ಣ ಜನ್ಮಾಷ್ಟಮಿ. ಮನುಕುಲದ ಲೌಕಿಕಜಗತ್ತಿನಲ್ಲಿ ಮುರಾರಿಯಇರುವಿಕೆಯನ್ನು ಕಲ್ಪಿಸಿಕೊಂಡು ಸಂಭ್ರಮಿಸುವ ಗಳಿಗೆಯೂ ಹೌದು. ಬಾಲ್ಯದಿಂದ ಯೌವನದ ತನಕ ಬಾಲಕೃಷ್ಣನ ವಿನೋದಾವಳಿಗಳನ್ನುಜನ್ಮಾಷ್ಟಮಿ ಪ್ರತಿವರ್ಷ ಸ್ಮರಣೆಗೆ ತರುತ್ತದೆ.

ತಾಲ್ಲೂಕಿನ ವಿವಿಧೆಡೆ ಕೃಷ್ಣನ ಜನುಮದಿನದ ಹಬ್ಬವನ್ನುಸಡಗರ ಸಂಭ್ರಮದಿಂದಆಚರಿಸಲಾಗುತ್ತದೆ. ಯಳಂದೂರು ರಾಯರಮಠ, ಬಿಳಿಗಿರಿರಂಗನ ಬೆಟ್ಟ ಮೊದಲಾದೆಡೆ ವಿವಿಧಭಂಗಿಗಳಲ್ಲಿ ಕಂಗೊಳಿಸುವ ಕೃಷ್ಣನ ಶಿಲ್ಪಗಳನ್ನು ಕಾಣಬಹುದು. ಕೆಲವು ಭಾಗದಲ್ಲಿಬೆಣ್ಣೆ ಮೆಲ್ಲುವ ಬಾಲಕೃಷ್ಣ, ಯಶೋದೆಗೆ ಬ್ರಹ್ಮಾಂಡ ತೋರಿದ ಮಗ, ತುಂಟ ಕೃಷ್ಣ,ಗೋಪಿಕೆಯರ ಪ್ರೇಮದಾಟ, ರಾಧಾಕೃಷ್ಣರ ರಂಗಿನಾಟ.. ಇವೇ ಮೊದಲಾದ ಚಿತ್ರಗಳು ಇಲ್ಲಿ ಮೈದಳೆದಿವೆ.

ಬಿಳಿಗಿರಿರಂಗನ ಬೆಟ್ಟದದೊಡ್ಡರಥದಲ್ಲಿ ಹತ್ತಾರು ದೇವ–ದೇವತೆಗಳ ಮರದ ವಿಗ್ರಹಗಳನ್ನುಅಲಂಕರಿಸಲಾಗಿದೆ. ಇವುಗಳ ನಡುವೆ ಕೃಷ್ಣನ ಬಾಲಲೀಲೆಗೆ ಸಂಬಂಧಿಸಿದ ಚಿತ್ರಗಳು ಗಮನಸೆಳೆಯುತ್ತವೆ. ಪಟ್ಟಣದ ಮಠದ ಪುಟ್ಟ ತೇರಿನ ತಳಭಾಗದಲ್ಲೂ ಹತ್ತಾರು ಚಿತ್ರಗಳಿವೆ. ನೀತಿ ಬೋಧಕ ಕತೆಗಳನ್ನು ತಿಳಿಸುವ ಮೂಲಕ ಕೃಷ್ಣನನ್ನು ಜನರ ದೇವನನ್ನಾಗಿಮಾಡುವ ಆಶಯ ಇಲ್ಲಿ ವ್ಯಕ್ತವಾಗಿದೆ ಎಂದು ವಿವರಿಸುತ್ತಾರೆ ಪಟ್ಟಣದ ಗೋಪಾಲಕೃಷ್ಣ.

ADVERTISEMENT

ಬನದಲ್ಲಿ ಕಂಸ ವಧೆ:ಪ್ರತಿ ವರ್ಷ ಬಿಳಿಗಿರಿರಂಗನಬೆಟ್ಟದ ದೇಗುಲದಲ್ಲಿ ಜನ್ಮಾಷ್ಟಮಿಯಂದು ಕೃಷ್ಣ ಕಂಸರಯುದ್ಧವನ್ನು ನೆನಪಿಸುವ ಧಾರ್ಮಿಕ ಉತ್ಸವವನ್ನು ಆಚರಿಸಲಾಗುತ್ತದೆ. ಆದರೆ, ದೇವಾಲಯದ ನವೀಕರಣ ಪ್ರಗತಿಯಲ್ಲಿ ಇರುವುದರಿಂದ ಈ ವರ್ಷ ಧಾರ್ಮಿಕ ಉತ್ಸವ ನಡೆಯುವುದಿಲ್ಲ.

ಅಂದು ಸಂಜೆಸಿಪ್ಪೆ ತೆಗೆದ ತೆಂಗಿನ ಕಾಯಿಗಳನ್ನು ಹಗ್ಗಕ್ಕೆ ಕಟ್ಟಿ ದೇವಳದ ಸುತ್ತಲೂಎಳೆಯಲಾಗುತ್ತದೆ. ಭಕ್ತರು ಎರಡು ಗುಂಪುಗಳಾಗಿ ಸೇರಿ ತೆಂಗನ್ನು ಒಡೆಯಲುಪ್ರಯತ್ನಿಸಿದರೆ, ಮತ್ತೊಂದು ಗುಂಪು ತಪ್ಪಿಸಲು ಪ್ರಯತ್ನಿಸುತ್ತದೆ. ಇದು ಕಂಸನು ಕೃಷ್ಣನನ್ನು ಕೊಲ್ಲಲು ಸಂಚು ಮಾಡುವ ಬಗೆಯನ್ನು ತಿಳಿಸುವ ಪರಂಪರೆಯನ್ನುವಿವರಿಸುತ್ತದೆ. ನಂತರ ಕಂಸನ ವಧೆ ನಡೆಸಿದ ಆಚರಣೆಯಲ್ಲಿ ಪಾಲ್ಗೊಂಡು ಉತ್ಸವಮೂರ್ತಿಯನ್ನು ತೊಟ್ಟಿಲಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಈ ಬಾರಿ ದೇವಾಲಯನವೀಕರಣ ನಡೆಯುತ್ತಿದೆ. ಹಾಗಾಗಿ, ಮುಂದಿನ ವರ್ಷ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಅರ್ಚಕ ರವಿಕುಮಾರ್.

ಪಟ್ಟಣದಲ್ಲಿ ಮಕ್ಕಳಿಗೆ ಕೃಷ್ಣನ ಪೋಷಾಕು ಧರಿಸಿಬಾಲಕೃಷ್ಣನ ಜನ್ಮದಿನ ಆಚರಿಸಲಾಗುತ್ತದೆ. ಸಂಘ–ಸಂಸ್ಥೆಗಳು ಸ್ಪರ್ಧೆಗಳನ್ನು ಆಯೋಜಿಸಿಪುಟ್ಟ ಕೃಷ್ಣಧಾರಿಗಳಿಗೆ ಬಹುಮಾನವನ್ನು ನೀಡುತ್ತವೆ. ಪೋಷಕರು ಹೆಣ್ಣು ಮತ್ತು ಗಂಡುಮಕ್ಕಳಿಗೆ ಕೊಳಲು, ಪಿಳ್ಳಂಗೋವಿ, ನವಿಲುಗರಿಗಳಿಂದ ಅಲಂಕರಿಸಿ ಗಮನ ಸೆಳೆಯುತ್ತಾರೆ.ಇತ್ತೀಚಿಗೆ ಕಾನ್ವೆಂಟ್‌ಗಳಲ್ಲೂ ಕೃಷ್ಣ ಸ್ಮರಣೆ ಮಾಡುವುದು ಫ್ಯಾಷನ್‌ ಆಗಿದೆ ಎಂದುಸಾಹಿತಿ ಗುಂಬಳ್ಳಿ ಬಸವರಾಜು ತಿಳಿಸಿದರು.

ಜಿಲ್ಲೆಯಾದ್ಯಂತ ಸಂಭ್ರಮ

ಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆದಿದೆ. ಶಾಲೆಗಳು, ಸಂಘ ಸಂಸ್ಥೆಗಳು ಮೊಸರುಕುಡಿಕೆ, ಕೃಷ್ಣವೇಷಧಾರಿ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.