
ಪ್ರಜಾವಾಣಿ ವಾರ್ತೆಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 16 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. 17 ಮಂದಿ ಗುಣಮುಖರಾಗಿದ್ದಾರೆ. ಸಾವು ಸಂಭವಿಸಿಲ್ಲ.
ಸದ್ಯ 234 ಮಂದಿ ಸೋಂಕಿತರಿದ್ದಾರೆ. ಐಸಿಯುನಲ್ಲಿ ಏಳು ಮಂದಿ ಹಾಗೂ ಹೋಂ ಐಸೊಲೇಷನ್‌ನಲ್ಲಿ 30 ಮಂದಿ ಇದ್ದಾರೆ.
ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 31,911ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 31,148ಕ್ಕೆ ತಲುಪಿದೆ.
ಸೋಮವಾರ 1,191 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು 1,172 ವರದಿಗಳು ನೆಗೆಟಿವ್ ಬಂದಿವೆ. 19 ಪ್ರಕರಣಗಳು ದೃಢಪಟ್ಟಿದ್ದು, ಮೂರು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.