ADVERTISEMENT

ಗಾಳಿಪಟ ಉತ್ಸವಕ್ಕೆ ಗಡಿ ಜಿಲ್ಲೆ ಸಜ್ಜು

ಭಾನುವಾರ ಬೆಳಿಗ್ಗೆ 11ಕ್ಕೆ ಆರಂಭ, ರಾಜ್ಯದಾದ್ಯಂತ ಸ್ಪರ್ಧಿಗಳು ಬರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 19:35 IST
Last Updated 24 ಜನವರಿ 2020, 19:35 IST
ಗಾಳಿಪಟ 
ಗಾಳಿಪಟ    

ಚಾಮರಾಜನಗರ: ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ (ಜ.26) ರಾಜ್ಯಮಟ್ಟದ 31ನೇ ಗಾಳಿಪಟ ಉತ್ಸವ ನಡೆಯಲಿದ್ದು, ‘ಗಡಿ ಜಿಲ್ಲೆ’ ಉತ್ಸವಕ್ಕೆ ಸಜ್ಜುಗೊಂಡಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಈಗಾಗಲೇ ರಾಜ್ಯಮಟ್ಟದ ಗಾಳಿಪಟ ಉತ್ಸವ ಈಗಾಗಲೇ ನಡೆದು ಜನಮನ್ನಣೆ ಗಳಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಉತ್ಸವ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಆರಂಭವಾಗಲಿದ್ದು, ಅದೇ ದಿನ ಬೆಳಿಗ್ಗೆ 9 ರಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರ ನೋಂದಣಿ ನಡೆಯಲಿದೆ.

ADVERTISEMENT

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಗಾಳಿಪಟ ಉತ್ಸವಕ್ಕೆ ಚಾಲನೆ ನೀಡುವರು.

ನಾಲ್ಕು ವಿಭಾಗ:ಸ್ಪರ್ಧೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿದೆ. 12 ವರ್ಷದೊಳಗಿನ ಕಿರಿಯರಿಗೆ, 13ರಿಂದ21ವರ್ಷ,22 ವರ್ಷ ಮೇಲ್ಪಟ್ಟವರು ಮತ್ತು 23 ವರ್ಷಹಿರಿಯರ ಮೇಲ್ಪಟ್ಟವರು ಸ್ಪರ್ಧೆ ನಡೆಯಲಿದೆ.

ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ, ನಗದು ಬಹುಮಾನ ಹಾಗೂ ಪ್ರತಿ ವಿಭಾಗಕ್ಕೂ ಎರಡೆರಡು ಸಮಾಧಾನಕರ ಬಹುಮಾನಗಳು ಇರುತ್ತದೆ.ತಂಡ ವಿಭಾಗಕ್ಕೆ ಕನಿಷ್ಠ 5 ಅಡಿಗಳಗಾಳಿಪಟಕಡ್ಡಾಯ. ಸ್ಪರ್ಧಿಯ ಜೊತೆಗೆ ಒಬ್ಬರುಸಹಾಯಕರು ಇರಬಹುದಾಗಿದೆ.23 ವರ್ಷ ಮೇಲ್ಪಟ್ಟ ಹಿರಿಯರ ತಂಡಕ್ಕೆ ಒಬ್ಬರುಸ್ಪರ್ಧಿ ಹಾಗೂ ನಾಲ್ವರು ಸಹಾಯಕರು ಇರಲು ಅವಕಾಶವಿದೆ. ಗಾಳಿಪಟ ಹಾರಿಸಲು ಮಾಂಜಿ ದಾರ ಬಳಸುವಂತಿಲ್ಲ.

ಬಹುಮಾನ, ಸಮಾರೋಪ: ಸಂಜೆ4.30 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ 08226 224932ಅಥವಾ ಮೊಬೈಲ್‌ 94827 18278, 98441 60841 ಸಂಪರ್ಕಿಸಬಹುದು.

ಉತ್ಸವ ನಡೆದು ಬಂದ ಹಾದಿ

ಗಾಳಿಪಟ ಉತ್ಸವಕ್ಕೆ ಅಡಿಗಲ್ಲು ಇಟ್ಟವರು ಖ್ಯಾತ ಲೇಖಕ, ನಾಡೋಜ ಎಚ್.ಎಲ್.ನಾಗೇಗೌಡ. ಮರೆಯಾಗುತ್ತಿದ್ದ ಗಾಳಿಪಟ ಸಂಸ್ಕೃತಿಯನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅವರು 1987–88ರಅವಧಿಯಲ್ಲಿ ಗಾಳಿಪಟ ಉತ್ಸವ ಆರಂಭಿಸಿದರು. ಜತೆಗೆ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಕೂಡ ಆಯೋಜಿಸಲಾಯಿತು. 10–12 ಅಡಿ ಎತ್ತರದ, ಎಂಟು-ಹತ್ತು ಜನರು ಹಿಡಿಯಬೇಕಾದ ಗಾಳಿಪಟಗಳೂ ಉತ್ಸವದಲ್ಲಿ ಪಾಲ್ಗೊಂಡವು. ಮೊದಲ ಯಶಸ್ಸಿನ ನಂತರ ಉತ್ಸವದ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.