
ಗುಂಡ್ಲುಪೇಟೆ: ತಾಲ್ಲೂಕಿನ ಕುಣಗಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ರಾಜಶೆಟ್ಟಿ ಅವರಿಗೆ ಸೇರಿದ 7, ಪದ್ದಮ್ಮ ಅವರ ಮೂರು ಹಾಗೂ ಪ್ರಕಾಶ ಅವರಿಗೆ 3 ಸೇರಿ 12 ಕುರಿ ಮರಿಗಳು ಮೃತಪಟ್ಟಿವೆ.
ಕುರಿಗಳನ್ನು ಮೇಯಲು ಬಿಟ್ಟು, ಮರಿಗಳನ್ನು ಮನೆಗಳ ಮುಂದಿನ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದಾಗ ಶನಿವಾರ ಕೊಟ್ಟಿಗೆಗೆ ನುಗ್ಗಿದ ಬೀದಿ ನಾಯಿಗಳು ಕುರಿಮರಿಗಳನ್ನು ಕಚ್ಚಿ ಸಾಯಿಸಿವೆ.
ಭಾನುವಾರ ಹೊನ್ನೇಗೌಡನಹಳ್ಳಿಯ ಪಶುಚಿಕಿತ್ಸಕರು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು.
‘ಗ್ರಾಮದಲ್ಲಿ ಬೀದಿ ನಾಯಿಗಳು ಕುರಿ, ಮೇಕೆಗಳ ಮೇಲೆ ದಾಳಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದು, ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟವರು ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.