ಚಾಮರಾಜನಗರ: ತಾಲ್ಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಸುದರ್ಶನ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್ ಆಯ್ಕೆಯಾದರು.
ನಗರದ ಮೈಸೂರು ರಸ್ತೆಯಲ್ಲಿರುವ ಶ್ರೀದೇವಿ ಗಾರ್ಡನ್‌ನಲ್ಲಿ ನಡೆದ ತಾಲ್ಲೂಕು ಒಕ್ಕಲಿಗರ ಸಂಘದ ಸಭೆಯಲ್ಲಿ ಸುದರ್ಶನಗೌಡ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಸುಟ್ಟಸ್ವಾಮಿ ಗೌಡ, ಉಪಾಧ್ಯಕ್ಷರಾಗಿ ಚಿನ್ನು ಮುತ್ತು, ಕೆ.ಎಂ.ಮಂಜು, ಪಿ.ಕೆ.ರಾಜು, ಸಹ ಕಾರ್ಯದರ್ಶಿಯಾಗಿ ಸಿ.ಬಿ.ನಾಗೇಂದ್ರ, ಮಹಾ ಪೋಷಕರಾಗಿ ಚಿಕ್ಕತಾಯಮ್ಮ, ಚಿಕ್ಕರಂಗೇಗೌಡ, ಪೋಷಕರಾಗಿ ಮಂಜುನಾಥ್ ಗೌಡ, ಮಹೇಶ್‌ಗೌಡ, ಖಜಾಂಚಿಯಾಗಿ ನಾರಾಯಣ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಾಜದ ಅಭಿವೃದ್ಧಿಗೆ ಬದ್ಧ: ಸಂಘದ ಅಧ್ಯಕ್ಷ ಸುದರ್ಶನ ಗೌಡ ಮಾತನಾಡಿ, ಸಂಘದ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದು ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಸಂಘ ಹಾಗೂ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಂಘದ ನಿರ್ದೇಶಕ ನವಿಲೂರು ನಾಗೇಂದ್ರ, ಪಿ.ಎಚ್.ರಾಜು, ಅರುಣ್ ಕುಮಾರ್, ಪುರುಷೋತ್ತಮ್, ರಾಜಶೇಖರಮೂರ್ತಿ, ಸಿ.ಸಿ.ರಮೇಶ್, ಕೆ.ಮರಿಸ್ವಾಮಿ, ಸಿದ್ದರಾಜೇಗೌಡ, ಹೊಮ್ಮಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.