ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 1098 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಮೂವರಿಗೆ ಸೋಂಕು ಖಚಿತವಾಗಿದೆ. ಎಂಟು ಮಂದಿ ಗುಣಮುಖರಾಗಿದ್ದಾರೆ. ಸಾವು ಸಂಭವಿಸಿಲ್ಲ.
ಕೋವಿಡ್ ದೃಢಪಟ್ಟವರಲ್ಲಿ ಇಬ್ಬರುಗುಂಡ್ಲುಪೇಟೆ ತಾಲ್ಲೂಕಿನವರು. ಇನ್ನೊಬ್ಬರು ಹನೂರು ತಾಲ್ಲೂಕಿನವರು.
ಸೋಂಕು ಮುಕ್ತರ ಸಂಖ್ಯೆ ಹೆಚ್ಚಿರುವುದರಿಂದ ಸೋಂಕಿತರ ಸಂಖ್ಯೆ 44ಕ್ಕೆ ಇಳಿದಿದೆ. ಇಬ್ಬರು ಐಸಿಯುನಲ್ಲಿ, 17 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 32,447 ಪ್ರಕರಣ ದೃಢಪಟ್ಟಿವೆ. 31,865 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ ಹಾಗೂ ಕೋವಿಡ್ಯೇತರ ಕಾರಣಗಳಿಂದ 579 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.