ಹುಲಿ – ಸಂಗ್ರಹ ಚಿತ್ರ
ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಹೊರ ವಲಯದ ತೋಟದ ಮನೆಯಲ್ಲಿ ಹುಲಿ ದಾಳಿಗೆ ಕರು ಸತ್ತಿದೆ.
ಗ್ರಾಮದ ಗಂಗಪ್ಪ ಅವರು ವಿದ್ಯುತ್ ವಿತರಣಾ ಕೇಂದ್ರದ ಬಳಿಯ ತೋಟದ ಮನೆಯ ಕೊಟ್ಟಿಗೆಯಲ್ಲಿ ಹಸುಗಳೊಂದಿಗೆ ಕರುಗಳನ್ನು ಕಟ್ಟಿ ಹಾಕಿದ್ದರು. ಆಹಾರ ಅರಸಿ ಬಂದ ಹುಲಿ ದಾಳಿ ನಡೆಸಿ ಕರುವನ್ನು ಕೊಂದಿದೆ. ಚೀರಾಟದ ಶಬ್ದ ಕೇಳಿ ಗಂಗಪ್ಪ ಹೊರಗೆ ಬಂದು ನೋಡಿದಾಗ ಹುಲಿ ಅಲ್ಲಿಂದ ಓಡಿ ಹೋಗಿದೆ.
ಗ್ರಾಮದ ಸಮೀಪವೇ ಇರುವ ವಡೆಯನಪುರದ ಬಳಿ ಹಿಂದೆ ಹುಲಿ ದಾಳಿಗೆ ನಾಲ್ಕು ಜಾನುವಾರು ಸತ್ತಿದ್ದವು. ಈಗ ಕರು ಸತ್ತಿದೆ, ಆದ್ದರಿಂದ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು, ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.