ADVERTISEMENT

ಸಂತೇಮರಹಳ್ಳಿ: ಸಾಲುಮರದ ತಿಮ್ಮಕ್ಕಗೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:44 IST
Last Updated 19 ನವೆಂಬರ್ 2025, 2:44 IST
ಸಂತೇಮರಹಳ್ಳಿ ಶಾಕ್ಯ ನಾಟ್ಯಕಲಾ ಸಂಘದ ಕಚೇರಿ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಸಂತೇಮರಹಳ್ಳಿ ಶಾಕ್ಯ ನಾಟ್ಯಕಲಾ ಸಂಘದ ಕಚೇರಿ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಸಂತೇಮರಹಳ್ಳಿ: ಇಲ್ಲಿನ ಶಾಕ್ಯ ನಾಟ್ಯಕಲಾ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಸಂಘದ ಮಾರ್ಗದರ್ಶಕ ಕಮರವಾಡಿ ಮಹದೇವಸ್ವಾಮಿ ಅವರು ಪುಷ್ಪರ್ಚಾನೆ ನೆರವೇರಿಸಿ ಮಾತನಾಡಿ, ‘ಸಾಲುಮರದ ತಿಮ್ಮಕ್ಕ ಅವರು ನಿಧನದಿಂದ ರಾಜ್ಯವು ಪರಿಸರವಾದಿಯೊಬ್ಬರನ್ನು ಕಳೆದುಕೊಂಡತಾಗಿದೆ.  ಗಿಡಮರಗಳನ್ನೇ ತಮ್ಮ ಮಕ್ಕಳೆಂದು ಪ್ರೀತಿಸುತ್ತಿದ್ದ ಅವರು ರಸ್ತೆ ಬದಿ ಗಿಡಗಳನ್ನು ನೆಡುವ ಮೂಲಕ ಅವರಿಗೆ ‘ವೃಕ್ಷಮಾತೆ’ ಎಂದು ಹೆಸರಾಗಿದ್ದಾರೆ’ ಎಂದರು.

ತಿಮ್ಮಕ್ಕ ಅವರ ಸಾಧನೆಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದ್ದು, ಅವರ ಆದರ್ಶ ಯುವಜನತೆಗೆ ಸ್ಫೂರ್ತಿಯಾಗಿ ಅವರಂತೆ ನಾವೆಲ್ಲರೂ ಗಿಡಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಪಣತೊಡಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಶಾಕ್ಯ ನಾಟ್ಯಕಲಾ ಸಂಘದ ಕಾರ್ಯದರ್ಶಿ ಪ್ರಭಾವತಿ, ಸದಸ್ಯರಾದ ಜನ್ನೂರು ಶೇಖರ್, ಮಂಜು, ಪ್ರಕಾಶ್, ಮಹದೇವಸ್ವಾಮಿ, ಕಿರಣ್, ಯೋಗೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.