ADVERTISEMENT

ಆಮೆ ಮಾಂಸ ತಿನ್ನುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 14:33 IST
Last Updated 9 ಸೆಪ್ಟೆಂಬರ್ 2020, 14:33 IST
ಇಲ್ಲಿನ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯ ಬಳಿ ಆಮೆ ಮಾಂಸದ ಅಡುಗೆಯನ್ನು ತಯಾರಿಸಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ
ಇಲ್ಲಿನ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯ ಬಳಿ ಆಮೆ ಮಾಂಸದ ಅಡುಗೆಯನ್ನು ತಯಾರಿಸಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ   

ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯ ಬಳಿ ಆಮೆಯನ್ನು ಕೊಂದು ಮಾಂಸದ ಅಡುಗೆಯನ್ನು ತಯಾರಿಸಿ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಮಾಕಹಳ್ಳಿ ಗ್ರಾಮದ ಸುರೇಶ್, ಶಿವಣ್ಣ, ಗಣೇಶ್, ಕುಮಾರ್, ಶ್ರೀನಿವಾಸ್, ಹರೀಶ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಇವರೆಲ್ಲರೂ ಊರೂರು ಸುತ್ತಿಕೊಂಡು ಶಾಸ್ತ್ರ ಹೇಳಿ ಜೀವನ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಬಸ್ತೀಪುರ ಬಡಾವಣೆಯ ಕಬಿನಿ ನಾಲೆಯಲ್ಲಿ ಅಕ್ರಮವಾಗಿ ಆಮೆಗಳನ್ನು ಹಿಡಿದು ಅವುಗಳನ್ನು ಕೊಂದು ಅಡುಗೆ ತಯಾರಿಸುತ್ತಿದ್ದರು. ಈ ಕುರಿತು ರೈತ ಮುಖಂಡ ಮಹದೇವ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆರ್ಎಫ್ಒ ಪ್ರವೀಣ್ ರಾಮಪ್ಪ ಛಲವಾದಿ ಹಾಗೂ ಸಿಬ್ಬಂದಿ ಬಂದು ಆಮೆ ಚಿಪ್ಪು, ಮಾಂಸ ಹಾಗೂ ಮೂಳೆಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.