ಸಾವು
ಪ್ರಾತಿನಿಧಿಕ ಚಿತ್ರ
ಹನೂರು: ತಾಲ್ಲೂಕಿನ ಅಜ್ಜೀಪುರ ಸಮೀಪದ ಕುರುಬರದೊಡ್ಡಿ ಗ್ರಾಮದಲ್ಲಿ ಬುಧವಾರ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕುರುಬರ ದೊಡ್ಡಿ ಗ್ರಾಮದ ಕುಮಾರ್ ಎಂಬುವರ ಮಕ್ಕಳಾದ ಯೋಗೇಶ್(09) ಮತ್ತು ಸಂಜಯ್ (07) ಮೃತಪಟ್ಟವರು. ಕುಮಾರ್ ಎಂಬುವವರು ಕುರುಬರದೊಡ್ಡಿ ಗ್ರಾಮದವರಾಗಿದ್ದು ಪ್ರಸ್ತುತ ಹನೂರು ಸಮೀಪದ ಆರ್.ಎಸ್. ದೊಡ್ಡಿಯಲ್ಲಿ ವಾಸವಿದ್ದು ದಸರಾ ರಜೆ ಹಿನ್ನೆಲೆ ಮಕ್ಕಳು ಅಜ್ಜಿಯ ಮನೆಗೆ ಬಂದಿದ್ದರು. ಮೃತ ಮಕ್ಕಳು ಯೋಗೇಶ್ ಮತ್ತು ಸಂಜಯ್ ಹನೂರು ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಅಜ್ಜಿ ಮನೆಯ ಸಮೀಪ ಲಿಂಗಪ್ಪ ಎಂಬುವರ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಾಮಪುರ ಪೊಲೀಸರು ಭೇಟಿ ನೀಡಿ ಪರಿಶೀಲಿನ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.