ADVERTISEMENT

ಕಟ್ನವಾಡಿ: ಕಬ್ಬಿನ ಗದ್ದೆಯಲ್ಲಿ ಚಿರತೆಮರಿಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2022, 15:19 IST
Last Updated 25 ಡಿಸೆಂಬರ್ 2022, 15:19 IST
ಚಾಮರಾಜನಗರ ತಾಲ್ಲೂಕಿನ ಕಟ್ನವಾಡಿಯ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾದ ಚಿರತೆಮರಿಗಳು
ಚಾಮರಾಜನಗರ ತಾಲ್ಲೂಕಿನ ಕಟ್ನವಾಡಿಯ ಕಬ್ಬಿನ ಗದ್ದೆಯೊಂದರಲ್ಲಿ ಪತ್ತೆಯಾದ ಚಿರತೆಮರಿಗಳು   

ಚಾಮರಾಜನಗರ: ತಾಲ್ಲೂಕಿನ ಕಟ್ನವಾಡಿಯ ಕಬ್ಬಿನ ಗದ್ದೆಯೊಂದರಲ್ಲಿಭಾನುವಾರ ಎರಡು ಚಿರತೆಮರಿಗಳು ಪತ್ತೆಯಾಗಿವೆ.

ಗ್ರಾಮದ ಗುರು ಎಂಬುವವರ ಜಮೀನಿನಲ್ಲಿಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಚಿರತೆ ಮರಿಗಳು ಸಿಕ್ಕಿವೆ. ಎರಡೂ ಹೆಣ್ಣಾಗಿದ್ದು, ಹುಟ್ಟಿ 15ರಿಂದ 20 ದಿನಗಳು ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಮರಿಗಳು ಕಂಡು ಬಂದ ತಕ್ಷಣ ಗ್ರಾಮಸ್ಥರು ಚಾಮರಾಜನಗರ ವಲಯ ಅರಣ್ಯ ಸಿಬ್ಬಂದಿಗೆ ತಿಳಿಸಿದ್ದು, ಪ್ರಭಾರ ಆರ್‌ಎಫ್‌ಒ ವಿನೋದ್‌ ಗೌಡ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ADVERTISEMENT

‘ಎರಡು ಮರಿಗಳೂ ಆರೋಗ್ಯದಿಂದ ಇವೆ. ಅವುಗಳನ್ನು ತಾಯಿಯ ಜೊತೆ ಸೇರಿಸಬೇಕಾಗಿದೆ. ಸ್ಥಳದಲ್ಲಿ ಕ್ಯಾಮೆರಾ ಟ್ರ್ಯಾಪ್‌ ಅಳವಡಿಸಿ ಎರಡು ಮೂರು ದಿನ ಚಲನವಲನದ ಮೇಲೆ ನಿಗಾ ಇಡಲಾಗುವುದು.ತಾಯಿ ಚಿರತೆ ಮರಿಗಳಿಗಾಗಿ ವಾಪಸ್‌ ಬರಬಹುದು. ಸಿಬ್ಬಂದಿ ಸ್ಥಳದಲ್ಲೇ ಇರಲಿದ್ದಾರೆ’ ಎಂದು ಆರ್‌ಎಫ್‌ಒ ವಿನೋದ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.