ADVERTISEMENT

ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆನಂದ್ ರಾಜ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 14:14 IST
Last Updated 14 ಜುಲೈ 2024, 14:14 IST
ಕೊಳ್ಳೇಗಾಲತಾಲ್ಲೂಕು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆನಂದ್ ರಾಜ್ ಅವರನ್ನು ಪದಾಧಿಕಾರಿಗಳು ಸನ್ಮಾನಿಸಿದರು
ಕೊಳ್ಳೇಗಾಲತಾಲ್ಲೂಕು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆನಂದ್ ರಾಜ್ ಅವರನ್ನು ಪದಾಧಿಕಾರಿಗಳು ಸನ್ಮಾನಿಸಿದರು   

ಕೊಳ್ಳೇಗಾಲ: ತಾಲ್ಲೂಕು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆನಂದ್ ರಾಜ್ ಅವಿರೋಧವಾಗಿ ಆಯ್ಕೆಯಾದರು.

2024-25 ನೇ ಸಾಲಿನಿಂದ 2028-29 ನೇ ಸಾಲಿನ ವರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸರ್ವ ಸದಸ್ಯರ ಸಭೆ ನಡೆಯಿತು. ಗೌರವ ಅಧ್ಯಕ್ಷ ಶಿವರಾಮ್, ಉಪಾಧ್ಯಕ್ಷೆ ಸಾವಿತ್ರಮ್ಮ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಚಿ ಶಿವರಾಜ್, ಸಂಘಟನಾ ಕಾರ್ಯದರ್ಶಿ ಕಮಲಮ್ಮ, ಪುಟ್ಟಮಾದಮ್ಮ, ನಿಂಗರಾಜು, ಮಾದೇಶ್, ಸಹ ಕಾರ್ಯದರ್ಶಿ ಶಿವಮೂರ್ತಿ, ಪೂರ್ಣಿಮ, ಕ್ರೀಡಾ ಕಾರ್ಯದರ್ಶಿ ಮುಕುಂದ, ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಕುಮಾರ್, ಲೆಕ್ಕಪರಿಶೋಧಕ ಸಿದ್ಧಯ್ಯ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಆನಂದ್ ರಾಜ್ ಮಾತನಾಡಿ, ಸಂಘದ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಸಹಕಾರ ಮುಖ್ಯ ಸಂಘ ಮಾಡುವುದು ಮುಖ್ಯವಲ್ಲ ಅದರಿಂದ ಸಾರ್ವಜನಿಕರಿಗೆ ಹಾಗೂ ಶಿಕ್ಷಕರಿಗೆ ಉಪಕಾರ ವಾಗುವುದೇ ಮುಖ್ಯ ಎಂದರು. ಜಿಲ್ಲಾ ಸಂಘದ ಅಧ್ಯಕ್ಷ ರಾಮಸ್ವಾಮಿ, ಸೇರಿದಂತೆ ಅನೇಕ ಶಿಕ್ಷಕರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.