ADVERTISEMENT

ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 15:46 IST
Last Updated 14 ಆಗಸ್ಟ್ 2022, 15:46 IST
ವಿ.ಸೋಮಣ್ಣ
ವಿ.ಸೋಮಣ್ಣ   

ಕೊಳ್ಳೇಗಾಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಎನ್.ಮಹೇಶ್ ಹಾಗೂ ಸಚಿವ ವಿ.ಸೋಮಣ್ಣ ಸೇರಿ ಎಲ್ಲರೂ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತೇವೆ. ಒಳ್ಳೆಯ ಕೆಲಸಗಳಿಗೆ ಆದ್ಯತೆ ನೀಡುತ್ತೇವೆ. ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುತ್ತಾರೆ. ಅವರು ಸುಮ್ಮನೆ ಕೊರುವ ವ್ಯಕ್ತಿ ಅಲ್ಲ. ಅವರೊಬ್ಬ ಪ್ರಶ್ನಾತೀತ ನಾಯಕ ರಾಜ್ಯ ಪ್ರವಾಸಕ್ಕೆ ನಾನೂ ಹೋಗುತ್ತೇನೆ. ಇಲ್ಲಿಗೆ ಬಂದಾಗಲ್ಲೂ ಇರುತ್ತೇನೆ. ನಾಯಕ ಯಾವತ್ತಿದ್ರೂ ನಾಯಕನೇ. ಹಾಗಂತ ಎಲ್ಲರೂ ನಾಯಕರಾಗಲು ಆಗಲ್ಲ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಾವ ಬದಲಾವಣೆಯೂ ಆಗಲ್ಲ ಕಾಂಗ್ರೆಸ್‌ನವರು ಅದೇ ರೀತಿ ಸುಳ್ಳು ಹೇಳಿಕೊಂಡು ಹೋಗುತ್ತಿದ್ದಾರೆ. ದೇಶದ ಜನ ಎಲ್ಲ ಬೆಳವಣಿಗೆ ಗಮನಿಸುತ್ತಿದ್ದಾರೆ. ಹತ್ತಾರು ವರ್ಷ ಕಾಲ ಆಳಿದವರನ್ನು ನೋಡಿದ್ದಾರೆ. ಮುಂದೆಯೂ ನೋಡುತ್ತಾರೆ’ ಎಂದರು.

ಸರ್ಕಾರಿ ಜಾಹೀರಾತುಗಳಲ್ಲಿ ನೆಹರು ಪೋಟೊ ಕೈ ಬಿಟ್ಟಿರುವ ವಿಚಾರಕ್ಕೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಯಾರು ಸ್ವಾತಂತ್ರ್ಯ ಹೋರಾಟಗಾರರು? ಯಾರು ಅಲ್ಲ ಅಂತ ಹೇಳಲು ಸಾಧ್ಯವಿಲ್ಲ. ನೆಹರು ಪೋಟೋ ಹಾಕಬೇಡಿ ಎಂದು ಹೇಳುವುದಕ್ಕೆ ನಾನು ಯಾರು? ಸರ್ದಾರ್ ಪಟೇಲ್‌ರಿಂದ ಸಾವರ್ಕರ್‌ವರೆಗೆ ಅನೇಕ ಜನರು ದೇಶಕ್ಕಾಗಿ ಹೋರಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿಂತ ದೊಡ್ಡವರು ಯಾರು ಇಲ್ಲ. ಅವರು ಸಂವಿಧಾನ ಬರೆಯದಿದ್ದರೆ ನಾವು ಯಾರೂ ಇಲ್ಲಿ ಕೂರುತ್ತಿರಲಿಲ್ಲ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.