ADVERTISEMENT

ಖೇಲೋ ಇಂಡಿಯಾಕ್ಕೆ ಯಂಗ್ ಸ್ಕಾಲರ್ ಶಾಲೆ ತಂಡ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 13:53 IST
Last Updated 28 ಡಿಸೆಂಬರ್ 2023, 13:53 IST
ಗುಂಡ್ಲುಪೇಟೆಯ ಯಂಗ್ ಸ್ಕಾಲರ್ ಶಾಲಾ ಮಕ್ಕಳು ಚೆನ್ನೈನಲ್ಲಿ ನಡೆಯುವ ಖೇಲೋ ಇಂಡಿಯಾ ರಗ್ಬಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಫೋಟೊಗೆ ಪೋಸ್ ನೀಡಿದರು
ಗುಂಡ್ಲುಪೇಟೆಯ ಯಂಗ್ ಸ್ಕಾಲರ್ ಶಾಲಾ ಮಕ್ಕಳು ಚೆನ್ನೈನಲ್ಲಿ ನಡೆಯುವ ಖೇಲೋ ಇಂಡಿಯಾ ರಗ್ಬಿ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಫೋಟೊಗೆ ಪೋಸ್ ನೀಡಿದರು   

ಗುಂಡ್ಲುಪೇಟೆ: ಚೆನ್ನೈನಲ್ಲಿ ಡಿ. 29ರಂದು ನಡೆಯುವ ಖೇಲೋ ಇಂಡಿಯಾ ರಗ್ಬಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಟ್ಟಣದ ಯಂಗ್ ಸ್ಕಾಲರ್ ಶಾಲಾ ಮಕ್ಕಳು ತೆರಳುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಶುಭಕೋರಿ ಬೀಳ್ಕೋಡಲಾಯಿತು.

‘ಕರ್ನಾಟಕ ತಂಡವನ್ನು ಯಂಗ್ ಸ್ಕಾಲರ್ ಶಾಲಾ ಮಕ್ಕಳು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮಕ್ಕಳು ಪಂದ್ಯಾವಳಿ ಗೆದ್ದು ಪದಕ ತರಲಿ’ ಎಂದು ಶಾಲಾ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಶುಭ ಕೋರಿದರು.

ಉಪಾಧ್ಯಕ್ಷರಾದ ಎಚ್.ಎಸ್. ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕನಾಯಕ, ಶಾಲಾ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯವರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.