ADVERTISEMENT

ಅಸ್ಪೃಶ್ಯತೆ ನಿವಾರಣೆ : ಜನಜಾಗೃತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮೇ 2012, 4:50 IST
Last Updated 12 ಮೇ 2012, 4:50 IST

ಚಿಂತಾಮಣಿ: ನವ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದ್ದ ಅಂಬೇಡ್ಕರ್ ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆ ಹೋಗಲಾಡಿಸಲು ಜನತೆಯಲ್ಲಿ ಜಾಗೃತಿ ಮೂಡಿಸಿದರು ಎಂದು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಿಲಕಲನೇರ್ಪು ಹೋಬಳಿ ಶಾಖೆ ವತಿಯಿಂದ ತಾಲ್ಲೂಕಿನ ಬುರುಡಗುಂಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮತ್ತು ಬುದ್ಧ ಜಯಂತಿ ಉದ್ಘಾಟಿಸಿ ಮಾತನಾಡಿ,  ದೇಶ ಸ್ವತಂತ್ರಗೊಂಡು 64 ವರ್ಷಗಳೇ ಕಳೆದರೂ ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ ಇನ್ನೂ ಜೀವಂತವಾಗಿರುವುದು ದುರದೃಷ್ಟಕರ. ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಗಳನ್ನು ಅಲಂಕರಿಸಿಡೆದರೆ  ಅಸ್ಪೃಶ್ಯತೆ ಪಿಡುಗು ನಿವಾರಿಸಬಹುದು ಎಂದರು. 

 ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ವಿಜಯ ನರಸಿಂಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ಸಂಚಾಲಕ ಟಿ.ಕೆ.ವೆಂಕಟರವಣಪ್ಪ, ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೌಲ, ಮುಖಂಡರಾದ ಅನುಪ್ಪಲ್ಲಿ ಕೃಷ್ಣಾರೆಡ್ಡಿ, ಪ್ರಸಾದ್, ತುಳುವನೂರು ಶ್ರೀನಿವಾಸರೆಡ್ಡಿ,  ಸಂಚಾಲಕ ಚಲಪತಿ, ನಾರಾಯಣಸ್ವಾಮಿ, ಟಿಪ್ಪುಸುಲ್ತಾನ್, ರಘು, ಬಿ.ಕೆ.ನರಸಿಂಹಪ್ಪ, ಮುನಿಸ್ವಾಮಿ, ಮುನಿವೆಂಕಟರವಣ, ಶಿವಣ್ಣ, ಮಂಜುನಾಥ್, ಆಂಜಪ್ಪ, ಓಬಣ್ಣ, ಸುರೇಶ್, ಗಂಗಣ್ಣ, ಶ್ರೀರಾಮ್, ಗಂಗಾಧರ್, ನರಸಿಂಹಪ್ಪ, ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.