ADVERTISEMENT

ಆರ್‌ಟಿಒ ಕಚೇರಿಗೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:45 IST
Last Updated 22 ಡಿಸೆಂಬರ್ 2012, 10:45 IST

ಬಾಗೇಪಲ್ಲಿ: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರ ಬಳಿಯಿರುವ ಪ್ರಾದೇಶಿಕ ಸಾರಿಗೆ ತೆರಿಗೆ ಕಚೇರಿಗೆ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳಗಿನ ಜಾವ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.

ಗುರುವಾರ ಬ್ಯಾಂಕ್‌ಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ತೆರಿಗೆ ಕಚೇರಿಯಲ್ಲಿ ಸುಮಾರು 57 ಸಾವಿರ ರೂಪಾಯಿ ಇತ್ತು ಎಂದು ಹೇಳಲಾಗಿದೆ. ಇದರಲ್ಲಿ ಗುರುವಾರ ಕಚೇರಿಯಲ್ಲಿ ಇಟ್ಟಿದ್ದ ಸುಮಾರು 41 ಸಾವಿರ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಪ್ಪ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿದ ಲೋಕಾಯುಕ್ತರ ತಂಡ ಸಂಗ್ರಹ ಆಗಿರುವ ಹಣ ಹಾಗೂ ದಾಖಲೆ ವಶಪಡಿಸಿಕೊಂಡು ಪರಿಶೀಲಿಸಿದರು.

ಪ್ರಾದೇಶಿಕ ಸಾರಿಗೆ ತೆರಿಗೆ ಇನ್ಸ್‌ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಸುರೇಂದ್ರಕುಮಾರ್ ಹಾಜರಿದ್ದು, ತನಿಖೆಗೆ ಸಂಬಂಧಿಸಿದ ಮಾಹಿತಿ ತಿಳಿಸಿದರು. ಗುರುವಾರ ನಡೆಸಿದ ಲೋಕ್ ಆದಾಲತ್‌ನಲ್ಲಿ ಸಾರ್ವಜನಿಕರ ದೂರಿನ ಅನ್ವಯ ಲೋಕಾಯುಕ್ತ  ಡಿವೈಎಸ್‌ಪಿ ನಾರಾಯಣ, ಸಿಪಿಐ ಕೃಷ್ಣನಾಯಕ್, ಸಿಪಿಐ ಸತ್ಯನಾರಾಯಣ ಶುಕ್ರವಾರ ಬೆಳಗಿನ ಜಾವ ಮಿಂಚಿನ ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.