
ಪ್ರಜಾವಾಣಿ ವಾರ್ತೆಚಿಕ್ಕಬಳ್ಳಾಪುರ: `ನಿಮ್ಮೂರಿಗೆ ಬಂದ ಕೂಡಲೇ ಖಾಲಿ ಕೊಡ ಗಳನ್ನು ತೋರಿಸುತ್ತೀರಾ? ಖಾಲಿ ಕೊಡಗಳ ಸಿಂಬಾಲ್ ನನಗೂ ಗೊತ್ತು. ಸುಮ್ಮನೆ ಕೊಡ ಇಳಿಸಮ್ಮ. ನೀರಿನ ಸಮಸ್ಯೆ ಯಿದ್ದರೆ, ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ. ನನಗ್ಯಾಕೆ ಕೇಳುತ್ತೀರಾ?
ನೀರಿಲ್ಲದ ಕಾರಣ ಸಮಸ್ಯೆಯನ್ನು ತೋರಪಡಿಸಲು ಖಾಲಿ ಕೊಡಗಳನ್ನು ಎತ್ತಿಕೊಂಡು ನಿಂತಿದ್ದ ಗ್ರಾಮೀಣ ಮಹಿಳೆ ಯರೊಡನೆ ಹೀಗೆ ಮಾತನಾಡಿದವರು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್. ತಾಲ್ಲೂಕಿನ ಮಂಡಿಕಲ್ ಸಮೀಪದ ಪಯ್ಯೂರ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಹೇಳಲೆತ್ನಿಸಿದಾಗ, ಪರಮೇಶ್ವರ್ ಈ ರೀತಿಯ ಉತ್ತರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.