ADVERTISEMENT

ಗುಡಿಬಂಡೆ: 23ರಿಂದ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 6:10 IST
Last Updated 20 ಜನವರಿ 2012, 6:10 IST

ಗುಡಿಬಂಡೆ: ಗಡಿನಾಡು ಪ್ರದೇಶ ಗುಡಿಬಂಡೆಯಲ್ಲಿ ಇದೇ ಮೊದಲ ಬಾರಿಗೆ  ಜ.23ರಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಆಡಳಿತ ವತಿಯಿಂದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಹಿರಿಯ ವಿದ್ವಾಂಸ ಕಸ್ತೂರಿ ಜಗನ್ನಾಥ್ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಸಾಹಿತ್ಯ ಪರಿಷತ್ ವತಿ ಯಿಂದ ಅಧಿಕೃತ ಆಹ್ವಾನ ನೀಡ ಲಾಯಿತು.
 ರಂಗಚೇತನ ಜಿ.ಬಿ.ಶೆಟ್ಟಪ್ಪ,ಗಮಕ ಕೋವಿದ ಗುಡಿಬಂಡೆ ರಾಮಾಚಾರ್ ಮಹಾದ್ವಾರ ನಿರ್ಮಿಸಲಾಗಿದೆ.

ವಿವಿಧ ಕಲಾ ಪ್ರಕಾರಗಳು, ಸ್ತಬ್ಧ ಚಿತ್ರಗಳು, ವೇಷ ಭೂಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ವೀರಗಾಸೆ , ಲಂಬಾಣಿ ನೃತ್ಯ ತಂಡ, ಚೆಕ್ಕೆ ಭಜನೆ, ಕೋಲಾಟ, ತಮಟೆ, ನಾದಸ್ವರ, ಬೊಂಬೆಯಾಟ ಸಮ್ಮೇಳನದಲ್ಲಿ ನಡೆಯಲಿದೆ. 

 ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಊಟದ ಸಂದರ್ಭದಲ್ಲಿ ಮಸಾಲೆ ಮಜ್ಜಿಗೆ ಪ್ಯಾಕೆಟ್ ವಿತರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.