ADVERTISEMENT

ಜಂಬೂ ಸವಾರಿಯಲ್ಲಿ ಮಿಂಚಿದ ‘ರಂಗಸ್ಥಳ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 6:08 IST
Last Updated 1 ಅಕ್ಟೋಬರ್ 2017, 6:08 IST
ಮೈಸೂರಿನಲ್ಲಿ ಶನಿವಾರ ನಡೆದ ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಾಗಿದ ಚಿಕ್ಕಬಳ್ಳಾಪುರ ಹೊರವಲಯದ ಐತಿಹಾಸಿಕ ರಂಗಸ್ಥಳದ ಸ್ತಬ್ಧಚಿತ್ರ
ಮೈಸೂರಿನಲ್ಲಿ ಶನಿವಾರ ನಡೆದ ದಸರಾ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಸಾಗಿದ ಚಿಕ್ಕಬಳ್ಳಾಪುರ ಹೊರವಲಯದ ಐತಿಹಾಸಿಕ ರಂಗಸ್ಥಳದ ಸ್ತಬ್ಧಚಿತ್ರ   

ಚಿಕ್ಕಬಳ್ಳಾಪುರ: ಸಾಂಸ್ಕತಿಕ ನಗರಿ ಮೈಸೂರಿನಲ್ಲಿ ಶನಿವಾರ ಅದ್ದೂರಿಯಾಗಿ ನಡೆದ ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ತಾಣವಾದ ‘ರಂಗಸ್ಥಳ’ ಸ್ತಬ್ಧಚಿತ್ರದ ರೂಪದಲ್ಲಿ ಮಿಂಚಿತು.

ಜಿಲ್ಲಾಡಳಿತವು ಈ ಸ್ತಬ್ಧಚಿತ್ರದ ನಿರ್ಮಾಣದ ಹೊಣೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ವಹಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರ ಸಿದ್ಧಗೊಂಡಿತ್ತು. ಬೃಹತ್‌ ದ್ವಾರ ಬಾಗಿಲು, ಹೆಡೆ ಬಿಚ್ಚಿದ ಆದಿಶೇಷನ ಮಡಿಲಲ್ಲಿ ಮಲಗಿದ ರಂಗನಾಥ ಸ್ವಾಮಿಯ ಮೂರ್ತಿಯನ್ನು ಸ್ತಬ್ಧಚಿತ್ರವನ್ನು ನಿರ್ಮಿಸಲಾಗಿತ್ತು.

ಮೈಸೂರು ದಸರಾ ಮಹೋ ತ್ಸವದಲ್ಲಿ ಶಿಕ್ಷಣ ತಜ್ಞ ಎಚ್‌. ನರ ಸಿಂಹಯ್ಯ, ಮೇಧಾವಿ ಎಂಜಿನಿಯರ್ ಸರ್‌.ಎಂ.ವಿಶ್ವೇಶ್ವರಯ್ಯ, ನಂದಿಗಿರಿ ಧಾಮ, ಗೌರಿಬಿದನೂರಿನ
ವಿಧುರಾ ಶ್ವತ್ಥದ ಹುತಾತ್ಮರ ಸ್ತೂಪ ಸ್ತಬ್ಧಚಿತ್ರದ ರೂಪದಲ್ಲಿ ಪ್ರದರ್ಶನಗೊಂಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.