ADVERTISEMENT

ಜಿಲ್ಲೆಯಲ್ಲಿ 134 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಕೊನೆ ದಿನ ಜಿಲ್ಲೆಯಾದ್ಯಂತ 58 ಅಭ್ಯರ್ಥಿಗಳಿಂದ ಉಮೇದುವಾರಿಕೆ; ಸ್ಪರ್ಧಾ ಕಣಕ್ಕಿಳಿದ ಘಟಾನುಘಟಿಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 8:24 IST
Last Updated 25 ಏಪ್ರಿಲ್ 2018, 8:24 IST

ಚಿಕ್ಕಬಳ್ಳಾಪುರ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ 58 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಒಟ್ಟು 134 ಅಭ್ಯರ್ಥಿಗಳು ನಾಮಪತ್ರ ಸಲ್ಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್, ಪಕ್ಷೇತರ ಅಭ್ಯರ್ಥಿಗಳಾಗಿ ಸುಧಾಕರ್, ಅಂಬೇಡ್ಕರ್ ಸಮಾಜವಾದಿ ಪಕ್ಷದಿಂದ ಎಂ.ಬಿ.ಅಶೋಕ್ ಮತ್ತು ಕನ್ನಡ ಪಕ್ಷದಿಂದ ಎನ್.ನರಸಿಂಹಮೂರ್ತಿ ಅವರು ನಾಮಪತ್ರ ಸಲ್ಲಿಸಿದರು.

ಬಾಗೇಪಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ಸಾಯಿಕುಮಾರ್, ಜೆಡಿಎಸ್‌ ಅಭ್ಯರ್ಥಿ ಸಿ.ಆರ್.ಮನೋಹರ್, ಸಮಾಜವಾದಿ ಪಕ್ಷದ ಸಾಸಿನ್ ತಾಜ್, ಲೋಕ್‍ ಅದಾಲತ್ ಪಕ್ಷದಿಂದ ನರಸಿಂಹಮೂರ್ತಿ, ಪಕ್ಷೇತರ ಅಭ್ಯರ್ಥಿ ಗಳಾಗಿ ರಾಮಕೃಷ್ಣಾ ರೆಡ್ಡಿ, ನರೇಂದ್ರ, ಗುಂಜೂರು ಆರ್. ಶ್ರೀನಿವಾಸ್‌ ರೆಡ್ಡಿ, ಎಸ್‌.ಎನ್.ಗೋವಿಂದರೆಡ್ಡಿ, ಮುನಿ ರಾಜ್, ಸುಬ್ಬಾರೆಡ್ಡಿ, ಎ.ಎಂ.ನರೇಂದ್ರ, ಬಾಬಾಜಾನ್, ಎಸ್.ಎಲ್.ರಾಮಮೋಹನ್, ಈಶ್ವರ ರೆಡ್ಡಿ ಅವರು ಉಮೇದುವಾರಿಕೆ ಸಲ್ಲಿಸಿದರು.

ADVERTISEMENT

ಈ ಬಾರಿಯ  ವಿಧಾನಸಭಾ ಚುನಾವಣೆಗೆ ಗೌರಿಬಿದನೂರು ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಗೌರಿಬಿದನೂರಿನಲ್ಲಿ ಸಿಪಿಎಂ ಅಭ್ಯರ್ಥಿ ಎನ್.ಆರ್. ರವಿಚಂದ್ರರೆಡ್ಡಿ, ಸಮಾಜವಾದಿ ಪಕ್ಷದಿಂದ ಖಾದರ್ ಸುಭಾನ್ ಖಾನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಎಂ.ಜಿ. ಅನಂತಕುಮಾರ್, ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದ (ಎಂಇಪಿ) ಎಚ್.ವಿ.ಯೊಗೇಶ್, ಪಕ್ಷೇತರ ಅಭ್ಯರ್ಥಿಯಾಗಿ ಅಜತ್‍ಖಾನ್ ನಾಮಪತ್ರ ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಜೆಡಿಎಸ್ ಅಭ್ಯರ್ಥಿಗಳಾಗಿ ಎಂ.ರಾಜಣ್ಣ, ಮೇಲೂರು ರವಿಕುಮಾರ್, ಬಿಜೆಪಿ ಅಭ್ಯರ್ಥಿ ಸುರೇಶ್, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಹಮದ್ ಇಸ್ಮಾಯಿಲ್, ರಿಪಬ್ಲಿಕನ್ ಸೇನೆ ವೆಂಕಟೇಶಪ್ಪ, ಜೈಭಾರತ್ ಜನಸೇನೆಯ ನಾರಾಯಣಸ್ವಾಮಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುನಿರಾಜ್, ಎಂಇಪಿ ಅಭ್ಯರ್ಥಿ ಯಾಮೇಗೌಡ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎನ್.ಶಂಕರಪ್ಪ, ಭಾರತೀಯ ಪ್ರಜಾ ಪಕ್ಷದಿಂದ ಡಾ.ಎಂ.ಸಿ.ಸುಧಾಕರ್, ಡಾ.ಬಾಲಾಜಿ, ಎಂಇಪಿ ಅಭ್ಯರ್ಥಿ ಗೌಸ್‌ಖಾನ್, ಜೈ ಭಾರತ ಜನ ಸೇನೆ ಪಕ್ಷದಿಂದ ಕೆ.ವಿ.ಶ್ರೀನಿವಾಸ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಕೃಷ್ಣಾರೆಡ್ಡಿ, ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾ ಪಕ್ಷದಿಂದ ಸಯ್ಯದ್ ಅಯೂಬ್, ಅಂಬೇಡ್ಕರ್ ಪೀಪಲ್ ಪಾರ್ಟಿಯಿಂದ ಶ್ರೀನಾಥ್, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಹನುಮಂತರಾಯಪ್ಪ, ಕೆ.ಆರ್. ಸುಂದರ್ ಮೂರ್ತಿ, ಜಿ.ಎಸ್‌.ಸುಭಾಷ್, ಎಂ.ಕೃಷ್ಣಾರೆಡ್ಡಿ, ಕೃಷ್ಣಾರೆಡ್ಡಿ, ಕೃಷ್ಣಾರೆಡ್ಡಿ, ಟಿ.ಸಿ ವೆಂಕಟೇಶ್, ಎಂ.ಸುಧಾಕರ್, ಪಿ.ಎಸ್. ಸುಧಾಕರ್ ರೆಡ್ಡಿ, ಟಿ.ಸಿ ವೆಂಕಟೇಶ್ ನಾಮಪತ್ರ ಸಲ್ಲಿಸಿದರು.

ಇಂದು ನಾಮಪತ್ರ ಪರಿಶೀಲನೆ

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ 24, ಬಾಗೇಪಲ್ಲಿಯಲ್ಲಿ 29, ಗೌರಿಬಿದನೂರಿನಲ್ಲಿ 15, ಶಿಡ್ಲಘಟ್ಟದಲ್ಲಿ 30 ಮತ್ತು ಚಿಂತಾಮಣಿಯಲ್ಲಿ 36 ಹೀಗೆ ಒಟ್ಟು 134 ನಾಮಪತ್ರಗಳು ಸಲ್ಲಿಕೆಯಾಗಿವೆ. ಬುಧವಾರ (ಏ.25) ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 27 ಕೊನೆ ದಿನವಾಗಿದ್ದು. ಮೇ 12 ರಂದು ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.