ಬಾಗೇಪಲ್ಲಿ: ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ದಲ್ಲಿ ಶುಕ್ರವಾರ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಚೌಡೇಶ್ವರಿ ದೇವಿ ಪರಿಷೆ ಅದ್ದೂರಿ ಯಿಂದ ನಡೆಯಿತು. ಇಲ್ಲಿ ಗಮನ ಸೆಳೆದದ್ದು ಅಲಂಕಾರ, ದೀಪದ ಮೆರವಣಿಗೆ ಹಾಗೂ ಜಾರುಟ್ಲು ಪರಿಷೆ.
ತಾಲ್ಲೂಕಿನ ಪೋತೇಪಲ್ಲಿ ಗ್ರಾಮದಲ್ಲಿ ಶುಕ್ರವಾರ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಚೌಡೇಶ್ವರಿ ದೇವಿ ಮೂರ್ತಿ ಹೊತ್ತ ಪಲಕ್ಕಿ ನಲ್ಲಪರೆಡ್ಡಿಪಲ್ಲಿ ಗ್ರಾಮದ ಚೌಡೇಶ್ವರಿ ದೇಗುಲದ ತೋಪಿನವರಿಗೆ ಮೆರವಣಿಗೆ ನಡೆಯಿತು.
ನಲ್ಲಪರೆಡ್ಡಿಪಲ್ಲಿ ಗ್ರಾಮದ ಮಹಿಳೆಯರಿಂದ ದೀಪದ ಮೆರವಣಿಗೆ ನಡೆಯಿತು. ನಂತರ ನಡೆದ `ಜಾರುಟ್ಲು~ ಪರಿಷೆಯಲ್ಲಿ ಭಾವಹಿಸುವ ಯುವ ಕರು ಉದ್ದನೆಯ ಕೋಲು ಹಿಡಿದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರಿಷೆಯಲ್ಲಿ ಉದ್ದನೆ ಹಗ್ಗಕ್ಕೆ ಕಟ್ಟಿರುವ ತೆಂಗಿನ ಕಾಯಿಗೆ ಕೋಲಿನಿಂದ ಹೊಡೆಯಲಾಯಿತು.
ಕೆಮ್ಮಣ್ಣಿನಿಂದ ನಿರ್ಮಿಸಿಲಾದ ಕಂಬವನ್ನು ಏರಿದ ಯುವಕರು ನೋಡಿ ನೆರದಿರುವ ಜನರು ನಕ್ಕು ನಲಿದರು.
ತಾಲ್ಲೂಕಿನ ಪೋತೇಪಲ್ಲಿ, ರಾಯದುರ್ಗಂಪಲ್ಲಿ, ನಲ್ಲಪರೆಡ್ಡಿಪಲ್ಲಿ, ಪಾತಬಾಗೇಪಲ್ಲಿ ಗ್ರಾಮಗಳ ಸಾವಿರಾರು ಜನರು ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.