ADVERTISEMENT

ಪ್ರವಾಸಿ ಮಂದಿರ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 6:15 IST
Last Updated 17 ಫೆಬ್ರುವರಿ 2012, 6:15 IST

ಗೌರಿಬಿದನೂರು: ಪಟ್ಟಣದ ಪ್ರವಾಸಿ ಮಂದಿರದ ಆವರಣ ಗಿಡಗಂಟಿ ಮತ್ತು ತ್ಯಾಜ್ಯವಸ್ತುಗಳಿಂದ ಮಲಿನಗೊಂಡಿದೆ. ಇಡೀ ಆವರಣ ಹುಳು-ಹುಪ್ಪಟೆ ವಾಸ ಸ್ಥಾನವಾಗಿದ್ದು, ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪ್ರವಾಸಿ ಮಂದಿರದ ಆವರಣ ದೆಲ್ಲೆಡೆ ಸೊಳ್ಳೆಗಳ ಹಾವಳಿಯೂ ವಿಪ ರೀತವಾಗಿದೆ. ಒಣಹುಲ್ಲುಗಳು ಬೆಳೆ ದಿದ್ದು, ಅದನ್ನು ತೆರವು ಗೊಳಿಸ ಲಾಗಿಲ್ಲ. ಸಣ್ಣ ಬೆಂಕಿ ಕಿಡಿ ಹೊತ್ತಿ ಕೊಂಡರೂ ಭಾರಿ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಇದನ್ನ ರಿತು ಅಧಿಕಾರಿಗಳು ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳ ಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರವಾಸಿ ಮಂದಿರಕ್ಕೆ ಆಗಾಗ್ಗೆ ಸಚಿವರು, ಶಾಸಕರು ಮತ್ತು ಗಣ್ಯ ವ್ಯಕ್ತಿಗಳು ಭೇಟಿ ನೀಡುತ್ತಾರೆ. ಪ್ರವಾಸಿ ಮಂದಿರದ ಆವರಣವನ್ನು ಶುಚಿ ಯಾಗಿಡುವುದರತ್ತ ಗಮನ ಹರಿಸ ಬೇಕು ಎಂದು ಅವರು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.