ADVERTISEMENT

ಬಸ್‌ಗಳ ಕೊರತೆ: ಟಾಪ್ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 11:05 IST
Last Updated 10 ಸೆಪ್ಟೆಂಬರ್ 2011, 11:05 IST

ಗೌರಿಬಿದನೂರು:  ಪಟ್ಟಣದಲ್ಲಿ ಸೂಕ್ತ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಬಸ್‌ಗಳ ಟಾಪ್ ಮೇಲೆ ಕುಳಿತು ಪ್ರಯಾಣಿಸ ಬೇಕಾದ ಅನಿವಾರ್ಯತೆ ನಿರ್ಮಾಣ ಆಗಿದೆ.

ನಗರಗೆರೆ, ವಾಟದಹೊಸಹಳ್ಳಿ, ಯಲ್ಲೋಡು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಈ ಪ್ರಯಾಣ ಸಾಮಾನ್ಯ. ಬಸ್ ವೇಗವಾಗಿ ಸಂಚರಿಸುವಾಗ ಆಯ ತಪ್ಪಿ ಬೀಳುವ ಅಪಾಯ ಇದ್ದರೂ ಪ್ರಯಾಣ ಮುಂದುವರೆದಿದೆ.

`ಗ್ರಾಮಕ್ಕೆ ಬೆಳಗಿನ ಸಮಯದಲ್ಲಿ ಒಂದೇ ಬಸ್ ಹೊರಡುವುದರಿಂದ ಖಾಸಗಿ ಬಸ್ ಸೇವೆ ಅನಿವಾರ್ಯ ವಾಗಿದೆ. ಆತಂಕದಲ್ಲಿ  ಪ್ರತಿದಿನ ಸಂಚರಿಸಬೇಕಿದೆ.   ಇದಕ್ಕೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ವಿದ್ಯಾರ್ಥಿ ಮಹೇಶ್.

`ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬೆಳಿಗ್ಗೆ 8 ರಿಂದ 10 ಗಂಟೆ ಸಮಯ ದಲ್ಲಿ ಕನಿಷ್ಠ ಮೂರು ಬಸ್‌ಗಳು ಸಂಚರಿಸಿದರೆ ಅನುಕೂಲವಾಗು ತ್ತದೆ.  ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ  ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನವುದು ವಿದ್ಯಾರ್ಥಿಗಳಾದ ಅನಿಲ್‌ಕುಮಾರ್, ನವೀನ್‌ಕುಮಾರ್ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.